Site icon Ullalavani

ಬಂಟ್ವಾಳ: ಕಾರು-ಪಿಕಪ್ ಡಿಕ್ಕಿ- ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

ಬಂಟ್ವಾಳ, ಸೆ.28 :ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಮೂವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಬಂಟ್ವಾಳದ ಮಾಣಿ ಫ್ಲೈ ಓವರ್ ನಲ್ಲಿ ನಡೆದಿದೆ.


ಮಡಿಕೇರಿ ನಿವಾಸಿ ನಬೀಶ್ ( 55) ಮೃತಪಟ್ಟ ಮಹಿಳೆ. ನಾಲ್ಕು ಮಂದಿ ಮಹಿಳೆಯರು ಹಾಗೂ ಚಾಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಪುತ್ತೂರು, ಮಡಿಕೇರಿ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಹಿಂದಿನಿಂದಲೂ ದೂರುತ್ತಿದ್ದಾರೆ.ಹೊರಗಿನಿಂದ ಬಂದವರಿಗೆ ಈ ಸರ್ವಿಸ್ ರಸ್ತೆಯು ಮಡಿಕೇರಿ ಮೈಸೂರು ಮಹಾನಗರಕ್ಕೆ ಪ್ರವೇಶ ರಸ್ತೆ ಎಂದು ಸರಿಯಾಗಿ ತಿಳಿಯದೆ ವಾಹನ ಚಾಲನೆಯಲ್ಲಿ ಗೊಂದಲ ಉಂಟಾಗುತ್ತಿರುವುದು ದಿನೇ ಸಾಮಾನ್ಯವಾಗಿದೆ. ಕಿರಿದಾದ ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದೇ ಇರುವುದು ಮತ್ತು ಯಾವುದೇ ಸೂಚನಾ ಫಲಕ ಕೂಡಾ ಇಲ್ಲದೇ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗುತ್ತಿದೆ. 

Exit mobile version