ದಕ್ಷಿಣ ಕನ್ನಡ ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ ಹಾಗೂ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ಜಂಟಿ ತಂಡವು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ದರ್ಶನ್ ಕೆ.ಟಿ. ಅವರನ್ನು ಭೇಟಿ ಮಾಡಿ ಮೀನುಗಾರರ ಪ್ರಮುಖ ಸಮಸ್ಯೆಯಾದ ಸೀಮೆಎಣ್ಣೆ ದರ ಏರಿಕೆ ಕುರಿತು ಮಾತುಕತೆ ನಡೆಸಿತು.
ಪ್ರಸ್ತುತ ಸೀಮೆಣ್ಣೆಯ ದರ ಲೀಟರ್‌ಗೆ ₹117 ಆಗಿದ್ದು, ಈ ದರದಲ್ಲಿ ಸಣ್ಣ ಪ್ರಮಾಣದ ಸಾಂಪ್ರದಾಯಿಕ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರಿಗೆ ಇಂಧನ ವೆಚ್ಚವನ್ನು ಭರಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಮಸ್ಯೆಯನ್ನು ಈಗಾಗಲೇ ಕರ್ನಾಟಕದ ಮೀನುಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಆದರೂ ಇದುವರೆಗೆ ಯಾವುದೇ ಸೂಕ್ತ ಪರಿಹಾರ ದೊರೆತಿಲ್ಲ.
ಆದ್ದರಿಂದ ಮೀನುಗಾರರ ಹಿತದೃಷ್ಟಿಯಿಂದ ಸೀಮೆಣ್ಣೆ ದರವನ್ನು ಕಡಿಮೆ ಮಾಡಲು ಅಥವಾ ಸೂಕ್ತ ಸಬ್ಸಿಡಿ ನೀಡಲು ಸರ್ಕಾರದ ಮಟ್ಟದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಂಟಿ ನಿರ್ದೇಶಕರಲ್ಲಿ ಒತ್ತಾಯಿಸಲಾಯಿತು.
ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮೀನುಗಾರರ ಸಂಘಟನೆಗಳನ್ನು ಒಗ್ಗೂಡಿಸಿ ಮಂಗಳೂರಿನ ಮೀನುಗಾರಿಕಾ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಂಡದ ಸದಸ್ಯರು ಎಚ್ಚರಿಕೆ ನೀಡಿದರು.
ನಿಯೋಗದಲ್ಲಿ ಸತೀಶ್ ಕೋಟ್ಯಾನ್ – ಗೌರವಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ ಸುಣಿಲ್ ಜೆ. – ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ
ಆಸಿಫ್ ಎಂ.ಬಿ. – ಅಧ್ಯಕ್ಷರು, ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ಹಾಗು ಮುಖಂಡರಾದ
ಹೈದರ್ ,ರಿಯಾಜ್ ಒ.ಕೆ, ವಾಹಾಬ್ ಕುಧ್ರೋಲಿ, ಸಂಶುದ್ದೀನ್,ಇಸ್ಮಾಯಿಲ್,
ಜಮಾಲ್ ಕೋಡಿ ,ಸೌಕತ್, ಖಲೀಲ್ ಉಳ್ಳಾಲ ಉಪಸ್ಥಿತರಿದ್ದರು.
ಸೀಮೆಣ್ಣೆ ದರದ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರಿಗೆ ತಂಡವು ಮನವಿ ಮಾಡಿತು.