ಕೋಝಿಕ್ಕೋಡ್, ಸೆ.23: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ಕೊಯ್ಯೋಡು ಪಿ.ಪಿ ಉಮರ್ ಮುಸ್ಲಿಯಾರ್ ಮತ್ತು ಕೋಶಾಧಿಕಾರಿಯಾಗಿ ಎಂ.ಟಿ ಅಬ್ದುಲ್ಲ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರೊಫೆಸರ್ ಕೆ ಆಲಿಕುಟ್ಟಿ ಮುಸ್ಲಿಯಾರ್ ನಿಧನದ ಹಿನ್ನೆಲೆಯಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ ತೆರವಾಗಿತ್ತು. ಇದೀಗ ಆ ಹುದ್ದೆಗೆ ಕೋಶಾಧಿಕಾರಿಯಾಗಿದ್ದ ಪಿ.ಪಿ ಉಮರ್ ಮುಸ್ಲಿಯಾರ್‌ರನ್ನು ಮತ್ತು ಕೋಶಾಧಿಕಾರಿ ಹುದ್ದೆಗೆ ಎಂ.ಟಿ ಅಬ್ದುಲ್ಲ ಮುಸ್ಲಿಯಾರ್ ರವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಎ.ವಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮೂಸ ಕುಟ್ಟಿ ಹಝತ್, ಜೊತೆ ಕಾರ್ಯದರ್ಶಿಯಾಗಿ ಹೈದರ್ ಫೈಝಿ ಪಣಂಗಾಂಗರ ರನ್ನು ಆಯ್ಕೆ ಮಾಡಲಾಗಿದೆ.
ಕೋಝಿಕ್ಕೋಡ್ ಸಮಸ್ತಾಲಯದಲ್ಲಿ ಸಯ್ಯದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತು ಕೋಯ ತಂಳ್ ಅಧ್ಯಕ್ಷತೆಯಲ್ಲಿ ನಡೆದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾ ಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎಂದು ಅಧಿಕೃತ ಮೂಲಗಳು ತಿಳಿಸಿವೆ.