Site icon Ullalavani

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

ಬೆಂಗಳೂರು, ಸೆ.25: ಇನ್ಮುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಾಯಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ.

ಹಾಲಿನಿಂದ ತಯಾರಾಗದ ಪಾಮ್ ಆಯಿಲ್, ಹಾಲಿನ ಪುಡಿಯಿಂದ ತಯಾರಾಗುವ ಪನೀರ್‌ಗೆ ಪನೀರ್ ಅಂತ ಕರೆಯುವಂತಿಲ್ಲ. ಬದಲಿಗೆ ಅನಲಾಗ್ ಪನೀರ್‌ಗೆ ಹೆಸರು ಬದಲಾಯಿಸಬೇಕೆಂದು ಹೋಟೆಲ್, ಬೇಕರಿ, ಮದುವೆ ಮಂಟಪಗಳಿಗೆ ಕೇಂದ್ರ ಸೂಚನೆ ನೀಡಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಕೃತಕ ಪನೀರ್ ಬ್ಯಾನ್ ಆಗಿದೆ. ಹೀಗಾಗಿ ಇದೀಗ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.ಇನ್ನೂ ಹಾಲಿನಿಂದ ತಯಾರಿಸದ ಅನಲಾಗ್ ಪನೀರ್ ಉತ್ಪಾದನೆ, ಮಾರಾಟ ನಿರ್ಬಂಧಕ್ಕೆ FSSAI ಪ್ರಸ್ತಾವನೆ ಸಲ್ಲಿಸಿದೆ. ಪನೀರ್ ಹೆಸರಿನಲ್ಲಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವುದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ಲೇಬಲ್, ಮಾರ್ಕೆಟಿಂಗ್‌ನಲ್ಲೂ ಪನೀರ್ ಪದ ಬಳಕೆಗೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಿದೆ.ಸದ್ಯಕ್ಕೆ ಇದು ಪ್ರಾಸ್ತಾವಿತ ತಿದ್ದುಪಡಿಯಾಗಿದ್ದು, ಈ ಸಂಬಂಧ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಕೆಗೆ 60 ದಿನ ಕಾಲಾವಕಾಶ ನೀಡಲಾಗಿದೆ. ಸಲಹೆ-ಆಕ್ಷೇಪಣೆ ಪರಿಶೀಲನೆ ಬಳಿಕ ಅಂತಿಮ ನಿರ್ಧಾರ ಜಾರಿಯಾಗಲಿದೆ.

Exit mobile version