Site icon Ullalavani

22ನೇ ವರ್ಷದ ಸಾರ್ವಜನಿಕ ಕೊಣಾಜೆ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ಕೊಣಾಜೆ ಶಾರದಾ ನಗರದ ಸಪ್ತಸ್ವರ ಕಲಾತಂಡ (ರಿ.) ಸಪ್ತಸ್ವರ ಕಲಾತಂಡ ಸೇವಾ ಟ್ರಸ್ಟ್ (ರಿ.) ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಕೊಣಾಜೆ ಶಾರದೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಪ್ತಸ್ವರ ಕಲಾತಂಡದ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗ ಪ್ರೊಫೆಸರ್ ಡಾಕ್ಟರ್ ಪರಮೇಶ್ವರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಕೊಣಾಜೆ ಶಾರದೋತ್ಸವ ಕಳೆದ 21 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ, ಈ ವರ್ಷವೂ 22ನೇ ವರ್ಷದ ಕೊಣಾಜೆ ಶಾರದೋತ್ಸವ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ ಶಾರದಾ ಮಾತೆಯ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಹಾರೈಸಿದರು.

ಪ್ರಧಾನ ಗೌರವ ಸಲಹೆಗಾರರು ರವೀಂದ್ರ ರೈ ಕಲ್ಲಿ ಮಾರ್ ಮಾತನಾಡಿ ವರ್ಷ ವರ್ಷವೂ ಶಾರದೋತ್ಸವಕ್ಕೆ ಎಲ್ಲರ ಸಹಕಾರ ಅತಿಹೆಚ್ಚಿನ ರೀತಿಯಲ್ಲಿ ದೊರಕುತಿದೆ, ಈ ವರ್ಷವೂ ಅದೇ ರೀತಿಯಲ್ಲಿ ಇನ್ನಷ್ಟು ಹೆಚ್ಚಿನ ಸಹಕಾರ ದೊರೆಯಲಿ, ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಿ ಎಂದು ವಿನಂತಿಸಿದರು.

ಪ್ರಸಕ್ತ ಸಾಲಿನ ಶಾರದಾ ಉತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಅಂಚನ್, ಇದು ನನ್ನ ಪಾಲಿಗೆ ದೊರೆತ ಸೌಭಾಗ್ಯ, ಪ್ರತಿ ವರ್ಷದಂತೆ ಎಲ್ಲರ ಸಹಕಾರದಿಂದ ಶಾರದೋತ್ಸವ ಯಶಸ್ವಿಯಾಗಲಿ ಎಂದು ಕೇಳಿಕೊಂಡರು.

ಸಪ್ತಸ್ವರ ಕಲಾತಂಡದ ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಬಿ., ಕಲಾತಂಡದ ಅಧ್ಯಕ್ಷ ಸಂತೋಷ್ ಆಚಾರ್ಯ, ಶಾರದೋತ್ಸವ ಸಮಿತಿಯ ಕೋಶಾಧಿಕಾರಿ ರಾಮಚಂದ್ರ ಕೆ. ಮುಂತಾದವರು ಉಪಸ್ಥಿತರಿದ್ದರು.


ಸಪ್ತಸ್ವರ ಕಲಾತಂಡದ ಕಾರ್ಯದರ್ಶಿ ಜಿತೇಶ್ ಪ್ರಾರ್ಥಿಸಿದರು. ಸಪ್ತಸ್ವರ ಕಲಾತಂಡ ಸೇವಾ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ವರದರಾಜ ಕೆ. ಸ್ವಾಗತಿಸಿದರು. ಸೇವಾ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶ್ರೀ ಶಾರದಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಉದಯಕುಮಾರ್ ಶೆಟ್ಟಿ ವಂದಿಸಿದರು.

Exit mobile version