ಬಾಳೆಪುಣಿ: ಬದ್ರಿಯಾ ಜುಮಾ ಮಸ್ಜಿದ್ ಬಾಳೆಪುಣಿಯಲ್ಲಿ ವಾರ್ಷಿಕ ಮುಹ್ಯುದ್ದೀನ್ ರಾತೀಬ್ ಕಾರ್ಯಕ್ರಮವು ಉಸ್ತಾದ್ ಅಲಿ ಪೈಝಿ ಅವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಪೂರ್ವಕವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಹಾರಿಸ್ ಹನೀಫಿ, ಮುತಅಲ್ಲಿಮರು, ಮದ್ರಸಾ ವಿದ್ಯಾರ್ಥಿಗಳು ಸೇರಿದಂತೆ ಊರಿನ ಅಪಾರ ಸಂಖ್ಯೆಯ ಜನರು ಭಾಗವಹಿಸಿ ರಾತೀಬ್‌ಗೆ ಸಾಕ್ಷಿಯಾದರು.
ಪವಿತ್ರ ರಾತೀಬ್ ಮೂಲಕ ಅಲ್ಲಾಹನ ಸ್ಮರಣೆಯಲ್ಲಿ ಒಂದಾದ ಭಕ್ತರು ಆಧ್ಯಾತ್ಮಿಕ ವಾತಾವರಣದಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.