Site icon Ullalavani

ಮುಡಿಪುವಿನ ಕಿರಾತೇಶ್ವರ ಸ್ವಾಮಿ  ಮುಡಿಪ್ಪಿನ್ನಾರ್  ದೈವಸ್ಥಾನದಲ್ಲಿ  ಭೂಮಿ ಪೂಜೆ, ಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಮುಡಿಪು: ಮುಡಿಪಿನ ಶ್ರೀ ಕಿರಾತೇಶ್ವರ ಸ್ವಾಮಿ ದೈವಸ್ಥಾನದಲ್ಲಿ ಮುಂಬರುವ ಬ್ರಹ್ಮಕಲಶೋತ್ಸವದ ಅಂಗವಾಗಿ  ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ನೂತನ ಪ್ರವೇಶ ದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು.

ಮುಂಬರುವ ದಿನಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರವೇಶ ದ್ವಾರ ನಿರ್ಮಾಣಕ್ಕೆ ದೈವಸ್ಥಾನದ  ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಕುರಿತಾದ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.

ನಿನ್ನೆ ಬೆಳಿಗ್ಗೆ  ಮುಡಿಪುವಿನ ಶ್ರೀ ಕಿರಾತೇಶ್ವರ ಸ್ವಾಮಿ ದೈವಸ್ಥಾನದಲ್ಲಿ ಹೊಸ ಪ್ರವೇಶ ದ್ವಾರಕ್ಕೆ ಕ್ಷೇತ್ರದ ತಂತ್ರಿಗಳಾದ ನಡಿಬೈಲು ಶ್ರೀ ಶಂಕರನಾರಾಯಣ ಭಟ್  ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು,ಮೊಕ್ತೇಸರರಾದ ಅರ್ಕಾನ ಭಂಡಾರಮನೆ ಮನುವೆಂಕಟೇಶ್ ಭಟ್,ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾದ್ಯಕ್ಷರಾದ ಟಿ.ಜಿ.ರಾಜಾರಾಮ್ ಭಟ್,ಮತ್ತು ಪ್ರಶಾಂತ ಕಾಜವ ಮಿತ್ತಕೋಡಿ, ಅದ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್,ಕಾರ್ಯಾದ್ಯಕ್ಷರಾದ ಚಂದ್ರಶೇಖರ ಗಟ್ಟಿ ಗುಂಡ್ಯ,ಉಪಾದ್ಯಕ್ಷರಾದ ವಿಜೇಶ್ ವಿ.ನಾಯಕ್ ನಾರ್ಯನಡಿಗುತ್ತು,ಮತ್ತು  ಸಮಿತಿಯ ಸದಸ್ಯರು,ಊರ ಪರವೂರ ಗಣ್ಯರು,ಭಕ್ತರು ಉಪಸ್ಥಿತರಿದ್ದರು.

Exit mobile version