Site icon Ullalavani

ವರ್ಷಿತ್ ಕುಲಾಲ್ ಮನೆಗೆ ಡಿವೈಎಫ್‌ಐ ರಾಷ್ಟ್ರೀಯ ಯುವ ನಾಯಕಿ ದಿಪ್ಸಿತಾ ಧಾರ್ ಭೇಟಿ

ಉಳ್ಳಾಲ : ಕುತ್ತಾರು ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ತನ್ನ ಅಂಗಾಂಗ ದಾನ ಮಾಡಿದ ಡಿವೈಎಫ್‌ಐ ಕಾರ್ಯಕರ್ತ ವರ್ಷಿತ್ ಕುಲಾಲ್ ಮನೆಗೆ ರಾಷ್ಟ್ರೀಯ ಯುವ ನಾಯಕಿ ಪಶ್ಚಿಮ ಬಂಗಾಳದ ಕಾಮೆಡ್ ದಿಪ್ಪಿತಾ ಧಾರ್ ಭೇಟಿ ನೀಡಿದರು.
ಮಂಗಳೂರಿನಲ್ಲಿ ಡಿವೈಎಫ್‌ಐ ಜಿಲ್ಲಾ ಸಮ್ಮೇಳನ ಉದ್ಘಾಟಿಸಲು ಆಗಮಿಸಿದ ಮಂಗಳೂರು ವಿಮಾನ ನಿಲ್ದಾಣ ನಿಂದ ನೇರವಾಗಿ ವರ್ಷಿತ್ ಕುಲಾಲ್ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.


ಈ ಸಂದರ್ಭದಲ್ಲಿ ವರ್ಷಿತ್ ಕುಟುಂಬದರಿಗೆ ಧೈರ್ಯ ತುಂಬಿ ಸಂದಿಗ್ಧ ಪರಿಸ್ಥಿಯಲ್ಲಿ ವರ್ಷಿತ್ ಕುಟುಂಬ ತೆಗೆದು ಕೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷರಾದ ಬಿಕೆ ಇಮ್ಮಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಮಂಜೂರು, ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ರಿಝಾನ್ ಹರೇಕಳ, ತೈಯ್ಯುಬ್ ಬೆಂಗ್ರೆ, ರಝಕ್ ಮುಡಿಪು, ಸುನಿಲ್ ತೇವುಲ,ಮಾಧುರಿ ಬೋಳಾರ, ಅಜ್ಞಾನ್ ಬೆಂಗ್ರೆ, ವಿನಾಯಕ ಮಂಗಳೂರು ಉಪಸ್ಥಿತರಿದ್ದರು.

Exit mobile version