Site icon Ullalavani

ಮುಡಿಪು ಕ್ರಿಕೆಟ್ ಅಸೋಸಿಯೇಷನ್‌ನ ನೂತನ ಕಮಿಟಿ ರಚನೆ

ಮುಡಿಪು: ಮುಡಿಪು ಕ್ರಿಕೆಟ್ ಅಸೋಸಿಯೇಷನ್ (MCA) ಇದರ 2026/27ನೇ ಸಾಲಿನ ನೂತನ ಕಮಿಟಿಯನ್ನು ಸೆಪ್ಟೆಂಬರ್ 20ರಂದು SK ಹಾಲ್‌ನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ನಜೀರ್ ಮುಡಿಪು, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯುಬ್ ಮೊಂಟುಗೋಳಿ, ಕೋಶಾಧಿಕಾರಿಯಾಗಿ ಅನಿಲ್ ದಾಸ್ ನಾರ್ಯ, ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ತೋಟಾಲ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಉಸ್ಮಾನ್ ಅಲ್ತಾಫ್ ಹಾಗೂ ನಾಸೀರ್ ಮೊಂಟುಗೋಳಿ, ಜೊತೆ ಕಾರ್ಯದರ್ಶಿಗಳಾಗಿ ಝುಬೈರ್ ಮುಡಿಪು ಹಾಗೂ ಇರ್ಷಾದ್ ಪಡಿಕ್ಕಲ್ ಆಯ್ಕೆಯಾಗಿದ್ದು, ಹನ್ನೊಂದು ಮಂದಿ ಕಾರ್ಯಕಾರಿ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಯಿತು.

ಮುಡಿಪು ಹಾಗೂ ಆಸುಪಾಸಿನ ಬೆಲ್ಟ್ ಪ್ರದೇಶಗಳ ಕ್ರಿಕೆಟ್ ತಂಡಗಳು ಮತ್ತು ಪ್ರತಿಭಾವಂತ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು, ಕ್ರಿಕೆಟ್ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಉತ್ತಮ ಕ್ರೀಡಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮುಡಿಪು ಕ್ರಿಕೆಟ್ ಅಸೋಸಿಯೇಷನ್ ಕಾರ್ಯನಿರ್ವಹಿಸುತ್ತಿದೆ.

ಮುಂದಿನ ದಿನಗಳಲ್ಲಿ ವಾರದ ಪಂದ್ಯಕೂಟಗಳು ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ, ಸ್ಥಳೀಯ ತಂಡಗಳು ಹಾಗೂ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ MCAಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ನೂತನ ಕಮಿಟಿ ಹೊಂದಿದೆ.

Exit mobile version