ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ದೋಷಪೂರಿತ ಆಹಾರ ಪದಾರ್ಥಗಳಿಂದ ಆರೋಗ್ಯದಲ್ಲಿ ಆಗುವ ಏರುಪೇರುಗಳನ್ನು ಔಷಧಿಗಳಿಂದ ಗುಣಪಡಿಸಲು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಯೋಗದಿಂದ ಮಾತ್ರ ಆರೋಗ್ಯದ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ ಎಂದು ಕೋಟೆಕಾರು ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಯಶವಂತ್ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಕೃಷ್ಣನಗರದ ಮುದ್ದುಕೃಷ್ಣ ಶಾಖೆಯಲ್ಲಿ ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ಯೋಗನಡಿಗೆ, ಮಾತೃಪೂಜನ, ಮಾತೃಭೋಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಫಲಾಪೇಕ್ಷೆಯಿಲ್ಲದೆ ಯೋಗದ ಮೂಲಕ ಸಂಸ್ಕಾರವನ್ನು ಕಲಿಸುವ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಕಾರ್ಯವೈಖರಿ ಎಲ್ಲರೂ ಗೌರವಿಸಬೇಕು ಎಂದು ಮಂಗಳೂರಿನ ಪತಂಜಲಿ ಯೋಗಶಿಕ್ಷಣ ಕೇಂದ್ರ ಮಂಗಳುರು ವಲಯ ಅಧ್ಯಕ್ಷ ರವೀಶ್ ಹೇಳಿದರು.
ಛಾಯಗ್ರಾಹಕ ಕ್ಲಿಕ್ ಅಶೋಕ್ ಉಪಸ್ಥಿತರಿದ್ದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಗ್ರೀಷ್ಮಾ ಸ್ವಾಗತಿಸಿದರು.