ಮಂಗಳೂರು: ಬೆಂಗಳೂರಿನ ಎಲ್ಲಾಕ್ ಸಂಸ್ಥೆಯು ಆಯೋಜಿಸಿದ ಇಂಡಿಯಾ K 12 ಸ್ಕೂಲ್ ಅವಾರ್ಡ್ಸ್ ಸಮಾರಂಭದಲ್ಲಿ ದಿ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಸ್ಕೂಲ್, ಪ್ರಾಂಶುಪಾಲೆ, ಬಬಿತಾ ಸೂರಜ್ ಅವರು “ಎಕ್ಸಲೆನ್ಸ್ ಇನ್ ಪ್ರೊವೈಡಿಂಗ್ ಎಫೋರ್ಡೇಬಲ್ ಅಂಡ್ ಕ್ವಾಲಿಟಿ ಎಜುಕೇಶನ್” (Excellence in providing Affordable & Quality Education)ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಗೌರವವು ಶಾಲೆಯ ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನ ಹಾಗೂ ಕೈಗೆಟುಕುವ ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವವನ್ನು ಗುರುತಿಸಿದೆ. ಸಮ್ಮೇಳನದಲ್ಲಿ ದೇಶದ ವಿವಿಧ ಶಾಲೆಗಳ ಪ್ರಾಂಶುಪಾಲರು, ನಿರ್ದೇಶಕರು, ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಈ ಹಿಂದೆ ಟಿಸಿಐ ಶಾಲೆಗೆ ಏಷ್ಯಾ ಎಕ್ಸಲೆನ್ಸ್ ಅಂಡ್ ಲೀಡರ್ಶಿಪ್ ಅವಾರ್ಡ್ಸ್ ವತಿಯಿಂದ ದಿ ಮೋಸ್ಟ ಪ್ರೋಗ್ರೆಸ್ಸಿವ್ ಸ್ಕೂಲ್ ಇನ್ ಟೆಕ್ನಾಲಜಿ ಇಂಟೆಗ್ರೇಶನ್ ಪ್ರಶಸ್ತಿಯನ್ನು ಬಾಲಿವುಡ್ ನಟಿಯಾದ ಭಾಗ್ಯಶ್ರೀ ಅವರು ಪ್ರಧಾನ ಮಾಡಿದ್ದರು.
ಈ ಸಾಧನೆಯ ಕುರಿತು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಂಸ್ಥೆಯ ಪ್ರತಿಯೊಬ್ಬರಿಗೂ ಹೆಮ್ಮೆ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. TCIS ಕುಟುಂಬಕ್ಕೆ ಈ ಪ್ರಶಸ್ತಿ ಹೆಮ್ಮೆಯ ಕ್ಷಣವಾಗಿದ್ದು, ಶಾಲೆಯ ಶೈಕ್ಷಣಿಕ ಪಯಣಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ.
