Site icon Ullalavani

ಕರ್ನಾಟಕ ಮುಸ್ಲಿಂ ಜಮಾತ್ ಮದ್ದಡ್ಕ ಘಟಕ; ಉಮ್ರಾ ಯಾತ್ರೆ ಕೈಗೊಳ್ಳುವವರಿಗೆ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ

ಮದ್ದಡ್ಕ: ಕರ್ನಾಟಕ ಮುಸ್ಲಿಂ ಜಮಾತ್ ಘಟಕದ ಅಧ್ಯಕ್ಷರು ಹಾಗೂ ರಾಜ್ಯ KMJ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಅಬ್ಬೋನ್ ಮದ್ದಡ್ಕ ಮತ್ತು ಘಟಕದ ಸದಸ್ಯರಾಗಿರುವ ಕೆ ಜಿ ಎನ್ ಅಚಬ್ಬಾಕ ಅವರು ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಕಾರಣ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.



ಕಾರ್ಯಕ್ರಮದಲ್ಲಿ ಕೆಎಂಜಿ ಸರ್ಕಲ್ ಅದಕ್ಷರಾದ ಅಬ್ದುಲ್ ಹಮೀದ್ ಪುರ್ಕಾನಿ ಅವರು ದುವಾ ಮಾಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉಸ್ಮಾನ್ ಹಾಜಿ, ಎಂ ಎಚ್ ಅಬೂಬಕ್ಕರ್, ಎಚ್.ಎಂ.ಹಸನಬ್ಬ, ಉಮರ್ ಮಟನ್ ,ಅಬುಸಾಲಿ ಹಾಜಿ, ಇರ್ಷಾದ್ ಪೊಲೀಸ್, ಮೊಹಮದ್, ಅಬ್ದುಲ್ ರಹಿಮಾನ್ , ಹಾಗೂ ಇನ್ನಿತರ ಗಣ್ಯರು, ಎಸ್ ವೈ ಎಸ್
ಕೆ ಎಂ ಜೆ ಸಂಘಟನೆಯ ನಾಯಕರು ಭಾಗವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮ ಸಂಯೋಜನೆಯನ್ನು ಎನ್ ಎಸ್ ಉಮರ್ ನಿರ್ವಹಿಸಿದರು.

Exit mobile version