Site icon Ullalavani

ಮಂಗಳೂರು: ನೇತ್ರಾವತಿ ಸೇತುವೆ ಬಳಿ ಆಟೋ ರಿಕ್ಷಾ ಪಲ್ಟಿ

ಮಂಗಳೂರು, ಸೆ.16 : ರಾಂಗ್ ಸೈಡ್ ನಿಂದ ಬಂದ ರಿಕ್ಷಾವೊಂದು ಮತ್ತೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾದ ಘಟನೆ ತೊಕ್ಕೊಟ್ಟು ನೇತ್ರಾವತಿ ಸೇತುವೆ ಬಳಿ ನಡೆದಿದೆ.

ಢಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಹತ್ತಿರದಲ್ಲಿದ್ದ ಥಾರ್ ವಾಹನಕ್ಕೂ ಢಿಕ್ಕಿಯಾಗಿದೆ. ಚಾಲಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ರಾಂಗ್ ಸೈಡ್ ನಿಂದ ಬಂದ ರಿಕ್ಷಾ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಪರಿಣಾಮ ಆಟೋ ಮಗುಚಿಬಿದ್ದು ಹತ್ತಿರದ ಥಾರ್ ಎಸ್‌ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಂಗ್ ಸೈಡ್ ನಿಂದ ಬಂದ ಆಟೋ ಚಾಲಕ ಡಿಕ್ಕಿ ಹೊಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

Exit mobile version