ಬೆಂಗಳೂರು: ಕೃಷಿ ಹಾಗೂ ತೋಟಗಾರಿಕೆ ಶಿಕ್ಷಣ, ಸಂಶೋಧನೆಯಲ್ಲಿ ದೊಡ್ಡ ಹೆಸರು ಮಾಡಿದ್ದ, ಕರ್ನಾಟಕದ ಕೃಷಿ ತಜ್ಞ, ವಿಜ್ಞಾನಿ ಡಾ. ಮಂಜುನಾಥ ಕೃಷ್ಣಪ್ಪ ನಾಯ್ಕ(65) ಅಕಾಲಿಕವಾಗಿ ನಿಧನರಾಗಿದ್ದಾರೆ.
ನಿವೃತ್ತಿ ನಂತರವೂ ಕೃಷಿ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಂಜುನಾಥ ಅವರು ಈ ಬಾರಿಯ ಗಣೇಶ ಹಬ್ಬಕ್ಕೆ ಊರಿಗೆ ಹೋಗಿದ್ದರು. ಪೂಜೆಗೆ ನೀರು ತರಲೆಂದು ಹೋದಾಗ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಅವರ ಸ್ವಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆದಿದೆ.
ಗ್ರಾಮೀಣ ಪ್ರತಿಭೆ
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಕೋನಳ್ಳಿ ಗ್ರಾಮದವರಾದ ಮಂಜುನಾಥ ನಾಯ್ಕ ಅವರು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿವೃತ್ತರಾಗಿದ್ದರು.