Site icon Ullalavani

ಬೀರಿ-ಕೋಟೆಕಾರ್‌ ನ ಪರಿವಾರ್ ರೆಸಿಡೆನ್ಸಿಹೊಸ ಆಡಳಿತದೊಂದಿಗೆ ಸೆ.16ರಂದು ಮತ್ತೆ ಶುಭಾರಂಭ

ಮಂಗಳೂರು: ಕೋಟೇಕಾರ್ ಬೀರಿಯಲ್ಲಿರುವ ಪರಿವಾರ್ ರೆಸಿಡೆನ್ಸಿ ನೂತನ ಆಡಳಿತದೊಂದಿಗೆ ಹೊಸ ರೂಪದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿದ್ದು, ಇದರ ಅಂಗವಾಗಿ ‘ಬಾರ್ ಪರಿವಾರ್’ನ ಭವ್ಯ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 16ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.


ಕೋಟೇಕಾರ್ ಬೀರಿಯ ಸೋಮೇಶ್ವರ ಗ್ರಾಮದ ಪರಿವಾರ್ ರೆಸಿಡೆನ್ಸಿಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಗ್ರಾಹಕರು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.


ಹೊಸ ಆಡಳಿತದೊಂದಿಗೆ ಹೊಸ ಚೈತನ್ಯ : ಹೊಸ ಆಡಳಿತದೊಂದಿಗೆ ಪರಿವಾರ್ ರೆಸಿಡೆನ್ಸಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಸ್ಥಳೀಯ ಗ್ರಾಹಕರಿಂದ ಹಿಡಿದು ದೇಶ-ವಿದೇಶಗಳ ಜಾಗತಿಕ ಗ್ರಾಹಕರವರೆಗೆ ಎಲ್ಲರಿಗೂ ಅನುಕೂಲವಾಗುವಂತೆ ಗುಣಮಟ್ಟದ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಪರಿವಾರ್ ರೆಸಿಡೆನ್ಸಿಯಲ್ಲಿ ‘ಸ್ಪೈಸ್ ರೂಟ್’ ಮಲ್ಟಿ-ಕ್ಯೂಸಿನ್ ರೆಸ್ಟೋರೆಂಟ್ & ಬಾರ್, ಆಧುನಿಕ ಸೌಲಭ್ಯಗಳನ್ನು ಹೊಂದಿರುವ 21 ಎಕ್ಸಿಕ್ಯೂಟಿವ್ ಕೊಠಡಿಗಳು ಹಾಗೂ ಎಸಿ ಬ್ಯಾಂಕ್ವೆಟ್ ಹಾಲ್‌ಗಳು ಲಭ್ಯವಿವೆ. ಸುಮಾರು 1,000 ಮಂದಿ ಅತಿಥಿಗಳಿಗೆ ಆತಿಥ್ಯ ನೀಡುವ ಸಾಮರ್ಥ್ಯ ಹೊಂದಿರುವ ಬ್ಯಾಂಕ್ವೆಟ್ ಹಾಲ್‌ಗಳು ಮದುವೆ, ಸಭೆ, ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಸೂಕ್ತವಾಗಿವೆ.
‘ಗ್ಲೋಬಲ್ ಕ್ಯೂಸಿನ್, ಲೋಕಲ್ ಫ್ಲೇವರ್ಸ್, ಗ್ರೇಟ್ ಅಂಬಿಯನ್ಸ್’ ಎಂಬ ಪರಿಕಲ್ಪನೆಯೊಂದಿಗೆ ಸ್ಥಳೀಯ ರುಚಿಯೊಂದಿಗೆ ಜಾಗತಿಕ ಮಟ್ಟದ ಆಹಾರ ಅನುಭವವನ್ನು ನೀಡಲು ಸಂಸ್ಥೆ ಮುಂದಾಗಿದೆ. Celebrate – Dine – Stay ಎಂಬ ಪರಿಕಲ್ಪನೆಯಡಿ ಆಹಾರ, ಆಚರಣೆ ಹಾಗೂ ಆರಾಮದಾಯಕ ವಾಸ್ತವ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಆಡಳಿತದಡಿ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಇನ್ನಷ್ಟು ಹೊಸ ಸೌಲಭ್ಯಗಳು ಮತ್ತು ಸೇವೆಗಳನ್ನು ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಪರಿವಾರ್ ರೆಸಿಡೆನ್ಸಿಯ ಮ್ಯಾನೇಜಿಂಗ್ ಪಾರ್ಟ್ನರ್‌ಗಳಾದ ಕೃಷ್ಣ ಶೆಟ್ಟಿ ಮತ್ತು ರಘುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಆಡಳಿತದೊಂದಿಗೆ ಕಾರ್ಯಾಚರಣೆ ಆರಂಭಿಸುತ್ತಿದ್ದು, ಗುಣಮಟ್ಟದ ಆತಿಥ್ಯ, ಉತ್ತಮ ವಾತಾವರಣ ಮತ್ತು ಕೈಗೆಟುಕುವ ದರದಲ್ಲಿ ಸೇವೆ ನೀಡಲು ಆದ್ಯತೆ ನೀಡಲಾಗಿದೆ. ಸೆ.16ರಂದು ನಡೆಯಲಿರುವ ‘ಬಾರ್ ಪರಿವಾರ್’ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಸ್ಥೆಯ ಹೊಸ ಪ್ರಯತ್ನಕ್ಕೆ ಶುಭ ಹಾರೈಸುವಂತೆ ಸಂಸ್ಥೆಯ ವತಿಯಿಂದ ಕೋರಲಾಗಿದೆ.
ವಿಳಾಸ: #5-73, ಕೋಟೇಕಾರ್ ಬೀರಿ, ಸೋಮೇಶ್ವರ ಗ್ರಾಮ, ಉಳ್ಳಾಲ ತಾಲೂಕು, ಮಂಗಳೂರು – 575022
ಸಂಪರ್ಕ: 0824-2219000

Exit mobile version