Site icon Ullalavani

ತೊಕ್ಕೊಟ್ಟು: ಗ್ಯಾಂಗ್‍ವಾರ್‍ಗೆ ಯುವಕ ಬಲಿ

ಉಳ್ಳಾಲ್ ನ್ಯೂಸ್ ಡೆಸ್ಕ್

ತೊಕ್ಕೊಟ್ಟು: ಬೋಳಾರದ ಎರಡು ರೌಡಿ ಬಣಗಳ ನಡುವಿನ ಮದುವೆ ಮನೆಯಲ್ಲಿ ಭುಗಿಲೆದ್ದ ವೈಷಮ್ಯ ಬೋಳಾರದ ವಿಕ್ರಂ.ಆರ್ ಯಾನೆ ವಿಕ್ಕಿ ಬೋಳಾರ (29) ಎಂಬಾತನ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.

ಎದುರುಬಣದ ರೌಡಿ ಸೈಕೋ ವಿಕ್ಕಿ ತಂಡ ಹತ್ಯೆ ನಡೆಸಿದೆ ಎನ್ನಲಾಗಿದೆ. ಕುಂಪಲ ಮೂರುಕಟ್ಟದಲ್ಲಿ ತಮ್ಮ ಸ್ನೇಹಿತ ರೋಹಿತ್ ಎಂಬಾತನ ಮೆಹಂದಿ ಕಾರ್ಯಕ್ರಮದಲ್ಲಿ ಎರಡು ರೌಡಿಗಳ ತಂಡ ಭಾಗವಹಿಸಿತ್ತು. ಅಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯೊಂದು ನಡೆದಿತ್ತು. ಆ ಬಳಿಕ ಸೈಕೋ ವಿಕ್ಕಿ ಮನೆಯಿಂದ ಹೊರಹೋಗಿದ್ದನು. ಮತ್ತೆ ರಾತ್ರಿ ಸುಮಾರು 2.00 ಗಂಟೆ ವೇಳೆ ಪಾರ್ಟಿ ಮುಗಿಸಿ ಮಂಗಳೂರು ಕಡೆಗೆ ಅಭಿಲಾಷ್ ಶೆಟ್ಟಿ ಎಂಬಾತನ ಜತೆಗೆ ಬೋಳಾರ ವಿಕ್ಕಿ ಎಫ್.ಝೀ ಬೈಕಿನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಅದಾಗಲೇ ಕುಂಪಲ ಬೈಪಾಸಿನ ಸಮೀಪ ಬಿಳಿ ಸ್ಕಾರ್ಪಿಯೋ ವಾಹನದಲ್ಲಿ ಸೈಕೋ ವಿಕ್ಕಿ, ಗೌರೀಶ್ ಮತ್ತೆ ಇನ್ನೋರ್ವ ಸೇರಿದ ತಂಡ ಸ್ಕಾರ್ಪಿಯೋ ವಾಹನದಲ್ಲಿ ಎದುರು ನಿಂತಿದ್ದರು. ಕೂಡಲೇ ಅಪಾಯವರಿತ ಬೋಳಾರ ವಿಕ್ಕಿ ಬೈಕನ್ನು ವೇಗ ಚಲಾಯಿಸುವಂತೆ ಗೆಳೆಯನಲ್ಲಿ ತಿಳಿಸಿದ್ದ. ಅದರಂತೆ ಸ್ಕಾರ್ಪಿಯೋ ವಾಹನವನ್ನು ತಪ್ಪಿಸಿ ತೊಕ್ಕೊಟ್ಟು ಕಡೆಗೆ ವೇಗವಾಗಿ ಬೈಕನ್ನು ಚಲಾಯಿಸಿದಾಗ ಹಿಂಬದಿಯಿಂದ ಸ್ಕಾರ್ಪಿಯೋ ವಾಹನ ಅವರನ್ನು ಫಾಲೋ ಮಾಡಿತ್ತು. ಇದನ್ನು ಬೈಕನ್ನು ಅಟ್ಟಾಡಿಸುತ್ತಿರುವುದನ್ನು ಕುಂಪಲ ಬೈಪಾಸಿನ ಬಳಿ ಬಂದೋಬಸ್ತಿನಲ್ಲಿದ್ದ ಪೊಲೀಸರು ಕಂಡು ಪಿಸಿಆರ್ ವಾಹನಕ್ಕೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರ ವಾಹನ ಅಷ್ಟರಲ್ಲಿ ತೊಕ್ಕೊಟ್ಟು-ವಿಶ್ವವಿದ್ಯಾನಿಲಯ ರಸ್ತೆಯಲ್ಲಿರುವ ವಿನಮ್ರಾ ಬಾರಿನ ಎದುರುಗಡೆ ಬೈಕಿಗೆ ಹಿಂಬದಿಯಿಂದ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಬೋಳಾರ ವಿಕ್ಕಿಯನ್ನು ಯದ್ವಾತದ್ವ ಕಡಿದಿದ್ದಾರೆ. ಈ ವೇಳೆ ಅಭಿಷೇಕ್ ಶೆಟ್ಟಿ ಪರಾರಿಯಾಗಿದ್ದಾನೆ .

ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ, ಕ್ರೈಂ ಎಸ್.ಐ ರಾಜೇಂದ್ರ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

 

Exit mobile version