ಕೋಟೆಕಾರ್: ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ, ಹಿದಾಯತ್ ನಗರದ ವಿದ್ಯಾರ್ಥಿಗಳ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಅವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ‘ಅಲ್ ಮಿಸ್ಕ್ ಮಿಲಾದ್ ಫೆಸ್ಟ್’ ಕಾರ್ಯಕ್ರಮ ಸೆ.5ರಂದು ನಡೆಯಲಿದೆ.
ಅಂದು ಶನಿವಾರ ಅಪರಾಹ್ನ 2 ಗಂಟೆಗೆ ಅಲ್ ಹಿದಾಯ ಜುಮಾ ಮಸ್ಜಿದ್ ವಠಾರದಲ್ಲಿ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದಲ್ಲಿ ಬಹು. ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಸೇರಿದಂತೆ ಹಲವಾರು ಉಲಮಾ, ಉಮರಾ ಗಣ್ಯರು ಭಾಗವಹಿಸಲಿದ್ದಾರೆ.
ಈ ಕುರಿತು ಮದ್ರಸದ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.