Site icon Ullalavani

ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿ ವತಿಯಿಂದ ಇರಾ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆಗೆ ಸನ್ಮಾನ

ಬಾಳೆಪುಣಿ: ಇರಾ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅವರನ್ನು ಮಿಹ್ರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ವತಿಯಿಂದ ಆಯೋಜಿಸಲಾದ ಮೀಲಾದ್ ಸಂಭ್ರಮಾಚರಣೆಯ ಕೊನೆಯ ದಿನ ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಸಮಾಜಮುಖಿ ಸೇವೆ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಮಿಹ್ರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಸಂಘಟನೆಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version