Site icon Ullalavani

ಪಟ್ಟೋರಿ ಮಸೀದಿ ವತಿಯಿಂದ ವಿಜೃಂಭಣೆಯ ಈದ್ ಮೀಲಾದ್

ಉಳ್ಳಾಲ; ಪಟ್ಟೋರಿ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ಈದ್ ಮೀಲಾದ್ ಸಮಾರೋಪ ಕಾರ್ಯಕ್ರಮ ಹಾಗೂ ಮದ್ರಸ ವಿದ್ಯಾರ್ಥಿಗಳ ”ಇಷ್ಖೇ ಮದೀನಾ ” ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮವು ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಕೆದುಬಲ್ಲೆ ರವರ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ನಡೆಯಿತು.

ಬಹು ಅಬ್ದುಲ್ ಅಝೀಝ್ ಫೈಝಿ ಉಸ್ತಾದರು ಆರಂಬಿಕ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಉಸ್ತಾದರಾದ ಬಹು ಅಶ್ಫಾಕ್ ಮನ್ನಾನಿಯವರು ಅನನ್ಯವಾದ ಪ್ರವಾದಿ ಪ್ರೇಮವು ಇಹಪರ ವಿಜಯಕ್ಕೆ ನಾಂದಿಯಾಗಲಿದೆ ಎಂದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಸಿಎಂ ಶರೀಫ್ ಪಟ್ಟೋರಿ ಮಾತನಾಡಿ ಯುವಕರು ಮತ್ತು ವಿದ್ಯಾರ್ಥಿಗಳು ಚಟಗಳಿಂದ ದೂರವಿದ್ದು ಪ್ರವಾದಿ ಚರ್ಚೆಗಳನ್ನು ಮೈಗೂಡಿಸಿಕೊಂಡು, ಸರ್ವ ವಿಪತ್ತುಗಳ ಕೀಲಿ ಕೈ ಎಂದು ಪ್ರವಾದಿಯವರು ಎಚ್ಚರಿಸಿದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ಆರಂಭದಲ್ಲಿ ಯುವಕರ ದಫ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಬುರ್ಧಾ ಮಜ್ಲಿಸ್, ಕವಾಲಿ ಮುಂತಾದವು ಕಾರ್ಯಕ್ರಮಕ್ಕೆ ಮೆರುಗು ನೀಡಿತು. .

ಕಾರ್ಯಕ್ರಮದಲ್ಲಿ ಸಮಿತಿ ಮಾಜಿ ಅಧ್ಯಕ್ಷರಾದ ಬಾವ ಹಾಜಿ ಲಾಡ. ಕೋಶಾಧಿಕಾರಿ ಕುಂಞಿ ಮೋನು ಹಾಜಿ ಗುದುರು, ಉಪಾಧ್ಯಕ್ಷರಾದ ಮಹಮ್ಮಧ್ ಲಾಡ, ಮುಅಧ್ಸಿನ್ ಉಸ್ತಾದ್ ಅಬ್ದುಲ್ಲ ಮುಸ್ಲಿಯಾರ್, ಮುಅಲ್ಲಿಮ್ ಸಾದಿಕ್ ಸಫಾವಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಲೈಮಾನ್, ಅಬೂಬಕರ್, ಅಬ್ಬಾಸ್, ಹಸೈನಾರ್, ಸಾಲಿಹ್, ಆಸಿಫ್, ಹಮೀದ್ ಕೆಎಲ್, ಅನ್ಸಾರ್ ಗರಡಿ, ಮಹಮ್ಮದ್, ಸಿದ್ದೀಕ್, ಅಶ್ರಫ್, ಮತ್ತಿತರರು ಉಪಸ್ಥಿತರಿದ್ದರು. ಸಿಎಂ ಶರೀಫ್ ಪಟ್ಟೋರಿ ಸ್ವಾಗತಿಸಿದರು. ಸಾಧಿಕ್ ಸಫಾವಿ ಹಾಗೂ ಮಹಮದ್ ಲಾಡ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಾಲಿಹ್ ಪಟ್ಟೋರಿ ವಂದಿಸಿದರು.

Exit mobile version