ಕುತ್ತಾರು: ಗ್ರಾಹಕರಿಗೆ ಉತ್ತಮ ಸೇವೆ ನೀಡಿರುವ ಮೆಸ್ಕಾಂ ಉಳ್ಳಾಲ ಶಾಖೆಯ ಮೆಕ್ಯಾನಿಕ್ ಸಂತೋಷ್ ಲೋಬೋ ಅವರನ್ನು ಕುತ್ತಾರು ಮದನಿನಗರದ ಮದನಿನಗರ ಜುಮಾ ಮಸೀದಿ, ಖುವತ್ತುಲ್ ಇಸ್ಲಾಂ ಮದರಸ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಮೆಹಫಿಲ್ ತ್ವೈಬಾ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಸನ್ಮಾನಿಸಿದರು.
ಈ ಸಂದರ್ಭ ಮದನಿನಗರದ ಖತೀಬರಾದ ಖತೀಬ್ ಉಸ್ತಾದ್, ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ , ಸಾಮಾಜಿಕ ಮುಖಂಡ ಹೈದರ್ ಪರ್ತಿಪ್ಪಾಡಿ, ಸಾಖೀಲ್ ಮಾಖವಿ ಸೌದಿ ಅರೆಬಿಯಾ, ಮದನಿ ನಗರ ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಮದನಿ, ಉಪಾಧ್ಯಕ್ಷರಾದ ಸಿರಾಜ್ ಮದನಿನಗರ, ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಮುಸ್ತಾಫ, ಹಾಶಿರ್, ಸಾದಿಕ್ ಎಂ.ಕೆ, ಮುನಾವರ್, ಅಶ್ರಫ್, ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹಾಬಲ್ ಟಿ ದೆಪ್ಪೆಲಿಮಾರ್, ಫಾರುಕ್, ಅಶ್ರಫ್, ಅಝೀಝ್, ಪುತ್ತುಬಾವ ಉಪಸ್ಥಿತರಿದ್ದರು.
