Site icon Ullalavani

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವೈಭವದ ವರಮಹಾಲಕ್ಷ್ಮಿ ಪೂಜೆ

ಉಳ್ಳಾಲ : ರಾಣಿ ಅಬ್ಬಕ್ಕ ದೇವಿಯ ಆರಾಧ್ಯ ದೇವರಾದ ಹಾಗೂ ಮಾಗಣೆಯ ಭಕ್ತರ ಆರಾಧ್ಯ ಕೇಂದ್ರ ಆದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನದ ರಾಜರಾಜೇಶ್ವರಿ ಅಮ್ಮನವರ ಗುಡಿಯಲ್ಲಿ ವರ್ಷಂ ಪ್ರತಿ ನಡೆಯುವ ವರಮಹಾಲಕ್ಷ್ಮಿ ಪೂಜೆಯು ವೈಭವದಿಂದ ನಡೆಯಿತು.

ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಸೋಮೇಶ್ವರ ಭಜನಾ ಮಂಡಳಿಯವರು ಮತ್ತು ಊರ ಪರವೂರ ಭಕ್ತರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಸೋಮೇಶ್ವರ ಭಜನಾ ಮಂಡಳಿಯವರಿಂದ ಲಲಿತಾ ಸಹಸ್ರನಾಮ ಪಠಣ ನಂತರ ರಾಜರಾಜೇಶ್ವರಿ ಅಮ್ಮನವರಿಗೆ ವೈಭವದ ವರಮಹಾಲಕ್ಷ್ಮಿ ಪೂಜೆ ವಿಜೃಂಭಣೆಯಿಂದ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ರೈ ಮತ್ತು ಸದಸ್ಯರಾದ ಭಾಸ್ಕರ್ ಗಟ್ಟಿ, ಸುಹಾಸಿನಿ ಬಬ್ಬು ಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Exit mobile version