Site icon Ullalavani

ಬಾಳೆಪುಣಿಯಲ್ಲಿ ವಿಜೃಂಭಣೆಯಿಂದ ನಡೆದ ಮಿಲಾದುನ್ನೆಬಿ ಆಚರಣೆ

ಬಾಳೆಪುಣಿ: ಬದ್ರಿಯಾ ಜುಮಾ ಮಸೀದಿ ಬಾಳೆಪುಣಿ ಇದರ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಹಾಗೂ ಊರಿನವರು ಸೇರಿ ಮಿಲಾದುನ್ನೆಬಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು.

ಆಚರಣೆಯ ಅಂಗವಾಗಿ ಮಕ್ಕಳ ದಫ್, ಸ್ಕೌಟ್ ತಂಡ, ಫ್ಲವರ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ಬಳಿಕ ಅಚ್ಚುಕಟ್ಟಾಗಿ ಆಯೋಜಿಸಲಾದ ರ‍್ಯಾಲಿ ನಡೆಯಿತು. ಮದ್ರಸ ವಿದ್ಯಾರ್ಥಿಗಳು ಹಾಗೂ ಊರಿನವರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮಿಲಾದುನ್ನೆಬಿ ಅಂಗವಾಗಿ ನಡೆದ ರ‍್ಯಾಲಿಯಲ್ಲಿ ವಿವಿಧ ಆಕರ್ಷಕ ಪ್ರದರ್ಶನಗಳು ಗಮನ ಸೆಳೆದಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version