Site icon Ullalavani

ಪುತ್ತೂರು: ವಾಹನದ ಗ್ಲಾಸ್‌ , ನೋಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಳವಡಿಕೆ- ದಂಡ ವಿಧಿಸಿದ ಪೊಲೀಸರು

ಪುತ್ತೂರು, ಆ. 25 : ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಸ್ಟಿಕ್ಕರ್ ಅಳವಡಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳಿಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ದಂಡ ವಿಧಿಸಿದ್ದಾರೆ.

ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ ಹರಿದಿನಗಳು ಹಾಗೂ ಯಾವುದೇ ಕಾರ್ಯಕ್ರಮದ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version