Site icon Ullalavani

ಪರ್ಲೋಟು ರಸ್ತೆ ಅಪಘಾತ: ಯುವಕ ಹರ್ಷದ್ ಮೃತ್ಯು

ಪುತ್ತೂರು: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ ಮೃತಪಟ್ಟಿದ್ದಾರೆ.


ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹರ್ಷದ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಮುರ ನಿವಾಸಿ, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರರಾಗಿದ್ದಾರೆ. ಅವರು ನೆಹರು ನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು.

ಹರ್ಷದ್ ಅವರ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಕಲ್ಲೇಗ ಜಮಾಅತ್ ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version