Site icon Ullalavani

ಕಲ್ಕಟ್ಟದಲ್ಲಿ ಮೀಲಾದ್ ಸಂದೇಶ ರ‍್ಯಾಲಿ

ಕಲ್ಕಟ್ಟ:ಇಲ್ಯಾಸ್ ಜುಮಾ ಮಸೀದಿ,ರಿಫಾಯಿಯ್ಯ ಮದ್ರಸ ಇದರ ಆಶ್ರಯದಲ್ಲಿ,ಕರ್ನಾಟಕ ಮುಸ್ಲಿಂ ಜಮಾಅತ್,ಟಿಐವೈಎ, ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಬಿಎಸ್ ಕಲ್ಕಟ್ಟ ಘಟಕಗಳ ಸಹಯೋಗದಲ್ಲಿ ಈದ್ ಮಿಲಾದ್ ರ‍್ಯಾಲಿ ನಡೆಯಿತು.



ಉಪಾಧ್ಯಕ್ಷ ಅಶ್ರಫ್ ‌ಕಟ್ಟೆ ಧ್ವಜಾರೋಹಣ ನೆರವೇರಿಸಿದರು.ಕಲ್ಕಟ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಸಂದೇಶ ನೀಡಿದರು.ಸದ್ ರ್ ಶರೀಫ್ ಸ ಅದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಲ್ಕಟ್ಟ ರಿಫಾಯಿಯ್ಯ ಮದ್ರಸ ವಿದ್ಯಾರ್ಥಿಗಳ ಕಲ್ಕಟ್ಟ ದಿಂದ ಮಂಜನಾಡಿ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.ಈ ವೇಳೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ವನ್ನು ಸಾರಲಾಯಿತು.ನೂರಾರು ಮಂದಿ ಭಾಗವಹಿಸಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರವರ ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಪಾಲ್ಗೊಂಡರು.
ಇಸ್ಹಾಕ್ ಸ ಅದಿ, ರಝಾಕ್ ಸ ಅದಿ ಕಾರ್ಯಕ್ರಮ ನಿರೂಪಿಸಿದರು. ಹಸನ್ ಸ ಅದಿ ವಂದಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಪೊಡಿಯಬ್ಬ ಹಾಜಿ, ಉಪಾಧ್ಯಕ್ಷ ಮುಹಮ್ಮದ್ ಹಾಜಿ ಕಂಡಿಕ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋನು ಕೋಶಾಧಿಕಾರಿ ನಾಸೀರ್, ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು ಉಪಸ್ಥಿತರಿದ್ದರು.

Exit mobile version