Site icon Ullalavani

ಮುಂಬೈಯಲ್ಲಿ ‘ವೆಲ್ಹ್ ಘಡಿ’ ಸಂಗೀತ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ


ಮುಂಬೈ: ಜಾನ್ ವಿಲ್ಸನ್ ಲೋಬೋ ನಿರ್ಮಾಣದ ಬಹುನಿರೀಕ್ಷಿತ ‘ವೆಲ್ಹ್ ಘಾಡಿ’
ಕೊಂಕಣಿ ಚಿತ್ರದ ಸಂಗೀತ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮುಂಬೈನ ಸಕಿನಾಕಾ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಬಾಂಬೆ ಹೈಕೋರ್ಟ್ ವಕೀಲೆ ಹಾಗೂ ಮೆ| ಪಿ. ವಾಸ್ & ಕಂಪನಿಯ ಪಾಲುದಾರೆ ಅಡ್ವೊಕೇಟ್ ಜೆನೆವೀವ್ ಪಿ. ವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಚಲನಚಿತ್ರಗಳು ಭಾಷಾಭಿಮಾನದ ಜಾಗೃತಿಗೆ ಪೂರಕವಾಗಿವೆ. ಕೊಂಕಣಿ ಸಿನಿರಸಿಕರನ್ನು ಒಂದೆಡೆ ಸೇರಿಸಿ ಭಾಷಾಭಿಮಾನವನ್ನು ಮೆರೆಯುತ್ತಿರುವುದು ಸ್ತುತ್ಯರ್ಹ. ಇದು ಕೊಂಕಣಿ ಭಾಷೆಯ ವೈಭವ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿದೆ. ಮಾತೃಭಾಷೆಯ ಪರಂಪರೆಯನ್ನು ಜೀವಂತವಾಗಿರಿಸಲು ಹಾಗೂ ಕೊಂಕಣಿ ಚಿತ್ರರಂಗದ ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ಚಿತ್ರ ಪ್ರದರ್ಶನಗಳು ಮಹತ್ವದ ಸೇತುವೆಯಾಗಿವೆ. ‘ವೇಳ್ ಘಡಿ’ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಇತಿಹಾಸದ ಪುಟ ಸೇರುವಂತಾಗಲಿ ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಲೋಬೋ ಪ್ರೊಡಕ್ಷನ್’ ಸಂಸ್ಥೆಗೆ ಚಾಲನೆ ನೀಡಲಾಯಿತು.

ಸಜಾನ್ ಮೂವಿ ಪ್ರೊಡ್ಯೂಸರ್ ಲಾರೆನ್ಸ್ ಡಿಸೋಜಾ, ಹ್ಯಾರಿ ಫೆರ್ನಾಂಡಿಸ್, ವಾಲ್ಟರ್ ನಂದಲಿಕೆ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಯುವ ಲೇಖಕ ಹಾಗೂ ಕಲಾ ನಿರ್ದೇಶಕ ಸ್ಟ್ಯಾನಿ ಬೇಳಾ, ಮೈಕಲ್ ಡಿ’ಸೋಜಾ, ಕೋ-ಡೈರೆಕ್ಟರ್ ರೋಷನ್ ನೆಲ್ಲಿಗುಡ್ಡೆ, ವೈಲೆಟ್ ವಿಲ್ಸನ್ ಲೋಬೋ, ಲಿಯೋ ರಾಣಿಪುರ, ಮೂವಿ ಹೇರಿಯೋನ್ ಜೇಸ್ಲಿನ್ ನೂರನ್ಹ, ತಾರಾ ಬಂಟ್ವಾಳ್,
ಸೇರಿದಂತೆ ‘ವೇಳ್ ಘಡಿ’ ಚಿತ್ರದ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version