ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯ ವಿವರ: ಕುಂಪಲ ಮಸೀದಿಯ ರಾತ್ರಿಯ ನಮಾಜು ಮುಗಿಸಿ ಹೋದ ಬಳಿಕ ತಡರಾತ್ರಿ ಕಿಟಕಿಯ ಬಾಗಿಲಿಗೆ ಕಲ್ಲು ಬಿದ್ದ ಶಬ್ಧ ಸಮೀಪದವರಿಗೆ ಕೇಳಿಸಿತ್ತು. ತಕ್ಷಣ ಮಸೀದಿಯ ಗುರು ಲೈಟ್ ಹಾಕಿದರು ಎನ್ನಲಾಗಿದೆ. ಈ ವೇಳೆ ಕಲ್ಲೆಸೆದ ದುಷ್ಕರ್ಮಿಗಳು ಮಸೀದಿಯ ಕಡೆ ಇರಲಿಲ್ಲ. ಆದರೆ ಮಸೀದಿಯ ಕಿಟಕಿ ಗಾಜು ಹಾನಿಯಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಕಲ್ಲೆಸೆದಿರಬೇಕೆಂದು ಶಂಕಿಸಿದ ಈ ಜಮಾಅತ್‍ನ ಸದಸ್ಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸುರ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.