Site icon Ullalavani

ಬೈಕ್-ಕಾರು ಅಪಘಾತ: ಇಬ್ಬರು ದಾರುಣ ಸಾವು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಚ್ಚಿಲ: ಬೈಕ್ ಹಾಗೂ ಇನ್ನೋವಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ಸಂಕೊಳಿಗೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.

ಮೃತರನ್ನು ಉಚ್ಚಿಲ ಗುಡ್ಡೆ ನಿವಾಸಿ ಎಂ.ಇಬ್ರಾಹಿಂ (60) ಮತ್ತು ಉಚ್ಚಿಲ ನ್ಯಾಯಪಟ್ನ ನಿವಾಸಿ ಮಹಮ್ಮದ್ ಆಲಿ(40) ಮೃತಪಟ್ಟವರು.

ಘಟನೆ ವಿವರ:

ಇಬ್ರಾಹಿಂ ಅವರ ಮೂರನೇ ಮಗಳ ಮದುವೆ ನ.1 ರಂದು ನಿಗದಿಯಾಗಿತ್ತು. ಅದರ ಆಮಂತ್ರಣ ಪತ್ರಿಕೆಯನ್ನು ಹಂಚಲೆಂದು ತಲಪಾಡಿ ಕಡೆಗೆ ದೂರದ ಸಂಬಂಧಿ ಹಾಗೂ ಆಪ್ತ ಸ್ನೇಹಿತ ಮಹಮ್ಮದ್ ಆಲಿ ಅವರ ಜತೆಗೆ ಬೈಕಿನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಉಚ್ಚಿಲ ಬೋವಿ ಶಾಲೆ ಯ ಒಳರಸ್ತೆಯಿಂದ ರಾ.ಹೆ.66ರನ್ನು ಪ್ರವೇಶಿಸಲು ರಸ್ತೆಬದಿಯಲ್ಲಿ ಬೈಕನ್ನು ನಿಲ್ಲಿಸಿದ್ದ ಸಂದರ್ಭ ಕಾಸರಗೋಡು ಕಡೆಯಿಂದ ಮಂಗಳೂರಿಗೆ ಅತಿವೇಗವಾಗಿ ಬರುತ್ತಿದ್ದ ದೆಹಲಿ ನೋಂದಾಯಿತ ಇನೋವಾ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಬೈಕನ್ನು 20 ಮೀ.ವರೆಗೆ ಎಳೆದೊಯ್ದಿತ್ತು. ಗಂಭೀರ ಗಾಯಗೊಂಡ ಈರ್ವರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಕಾರು ಚಾಲಕ ಜೇಮ್ಸ್ ಜಾಜ್ ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹ ಸಂಭ್ರಮದಲ್ಲಿದ್ದರು !
ಇಬ್ಬರು ಹೆಣ್ಮಕ್ಕಳ ವಿವಾಹವನ್ನು ನೆರವೇರಿಸಿದ್ದ ಇಬ್ರಾಹಿಂ ಇದೀಗ ಮೂರನೇ ಪುತ್ರಿಯ ವಿವಾಹದ ಸಂಭ್ರಮದಲ್ಲಿದ್ದರು. ಕಳೆದ 40 ವರ್ಷಗಳಿಂದ ಹೊಸಂಗಡಿ ಜಂಕ್ಷನ್ನಿನಲ್ಲಿ ಸೈಕಲ್ ಅಂಗಡಿಯನ್ನು ನಡೆಸುತ್ತಿದ್ದರು. ಇಡೀ ಕುಟುಂಬ ಅವರನ್ನೇ ಅವಲಂಬಿತವಾಗಿತ್ತು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಆಧಾರಸ್ತಂಭವೇ ಕಳಚಿತು !
ಮಹಮ್ಮದ್ ಆಲಿ ಅವರಿಗೆ ಐವರು ಹೆಣ್ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಇಡೀ ಕುಟುಂಬದ ನಿರ್ವಹಣೆ ನಡೆಸುತ್ತಿದ್ದರು. ಎಳೆಯ ಹರೆಯದವರಾದ ಮಕ್ಕಳೆಲ್ಲರೂ ಶಾಲೆ ಕಲಿಯುವವರಾಗಿದ್ದಾರೆ. ಆರ್ಥಿಕವಾಗಿ ಸಬಲರಲ್ಲದ ಮಹಮ್ಮದ್ ಅವರ ಮನೆಮಂದಿಯ ಆಧಾರಸ್ತಂಭವೇ ಕಳಚಿದಂತಾಗಿದೆ.

Exit mobile version