Site icon Ullalavani

ಮುನ್ನೂರು ಗ್ರಾಮದ ಸಿಪಿಎಂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಸಪಲ್ಯ ಬಿಲ್ಲರಗುಡ್ಡೆ ನಿಧನ

ಮುನ್ನೂರು ಗ್ರಾಮ ಸಿಪಿಎಂ ಪಕ್ಷದ 1 ನೇ ಶಾಖಾ ಸದಸ್ಯರು ಪಕ್ಷದ ನಿಷ್ಠಾವಂತ ಸರಳ ಸಜ್ಜನಿಕೆಯ ಪ್ರಾಮಾಣಿಕ ಕಾರ್ಯಕರ್ತರು ಆಗಿದ್ದ ನಾರಾಯಣ ಸಪಲ್ಯ ಬಿಲ್ಲರ ಗುಡ್ಡೆ ಅನಾರೋಗ್ಯ ನಿಮಿತ್ತ ನಿಧನ ರಾಗಿದ್ದಾರೆ.


ಮುನ್ನೂರು ಗ್ರಾಮ ಸಿಪಿಎಂ ಪಕ್ಷದ ಮಾಜಿ ತಾಲೂಕು ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ದಯಾವತಿ ಕುತ್ತಾರ್ ರವರ ಪತಿಯಾದ ನಾರಾಯಣ್ ಸಣ್ಣ ಪ್ರಾಯದಲ್ಲೇ ಸಿಪಿಎಂ ಪಕ್ಷದ ಸದಸ್ಯರಾಗಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದರು ಕುತ್ತಾರಿನ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಮತ್ತು ಶ್ರೀ. ವೀರಾಂಜನೇಯ ವ್ಯಾಯಾಮ ಶಾಲೆಯ ಹಿತೈಷಿಯಾಗಿ ಗುರುತಿಸಿಕೊಂಡಿದ್ದರು.
ಮಂಗಳವಾರ ತನ್ನ ಸ್ವಗ್ರಹದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಸ್ಥಳೀಯ ಸಂಘ ಸಂಸ್ಥೆ ಸದಸ್ಯರುಸೇರಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.


ಸಿಪಿಎಂ ಪಕ್ಷದ ಜಿಲ್ಲಾ ನಾಯಕರಾದ ಕೆ. ಕೃಷ್ಣಪ್ಪ ಸಾಲಿಯಾನ್,ಯು. ಜಯಂತ್ ನಾಯಕ್, ಶೇಖರ್ ಕುಂದರ್ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಟಿ ದೆಪ್ಪೆಲಿ ಮಾರ್, ಸ್ಥಳೀಯ ಸಿಪಿಎಂ ನಾಯಕ ಕೆ. ವಿಶ್ವನಾಥ್ ತೇವುಲಮಾಜಿ ಪಂಚಾಯತ್ ಸದಸ್ಯ ಗಣೇಶ್ ಟೈಲರ್, ಗಣೇಶ್ ತಲೆನೀರ್, ನವೀನ್ ಗಿರಿಯ ಮೂಲೆ ಕಾರ್ಮಿಕ ಮುಖಂಡರುಗಳಾದ ಕೆ. ಜನಾರ್ಧನ್ ಕುತ್ತಾರ್, ಜಯರಾಮ್ ತೇವುಲ, ಯುವಜನ ನಾಯಕರಾದ ಅಡ್ವಾಕೇಟ್ ನಿತಿನ್ ಕುತ್ತಾರ್ ಸುನಿಲ್ ತೇವುಲ, ಮಿಥುನ್ ಕುತ್ತಾರ್ ಪದವು, ಸ್ವೀಕೃತ್ ಕುತ್ತಾರ್ ಮತ್ತಿತರರು ಭಾಗವಹಿಸಿ ಅಂತಿಮ ವಿದಾಯ ಸಲ್ಲಿಸಿದರು.

Exit mobile version