ಉಳ್ಳಾಲ: ಕುತ್ತಾರು, ಪಂಡಿತ್ ಹೌಸ್‌ನ ವಿಜಯ ಗೇಮ್ಸ್ ಟೀಮ್‌ನ ನೂತನ ಅಧ್ಯಕ್ಷರಾಗಿ ಮಾರ್ವಿನ್ ಡೇವಿಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಚಂದ್ರಹಾಸ್ ಪಂಡಿತ್ ಹೌಸ್ ಅವರು ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಕಿರೋಡಿಯನ್ ಹಾಗೂ ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಮಹಾಸಭೆಯಲ್ಲಿ ಧನರಾಜ್ ಪ್ರಸ್ತಾವಿಸಿ ಸ್ವಾಗತಿಸಿದರು. ಕೋಶಾಧಿಕಾರಿ ಭರತ್ ಶೆಟ್ಟಿ ಸಂಘದ ಲೆಕ್ಕಪತ್ರವನ್ನು ಮಂಡಿಸಿದರು.