ಹರೇಕಳ: ಕಲಾಯಿ ಫ್ರೆಂಡ್ಸ್ ಸರ್ಕಲ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ
ಕಲಾಯಿ ಹರೇಕಳದಲ್ಲಿ ಆಚರಿಸಲಾಯಿತು. ಮಂಗಳೂರು ಮಂಡಲದ 60ನೇ ಬೂತ್ ಕಾರ್ಯದರ್ಶಿ ಸುಖಾನಂದ ಶೆಟ್ಟಿ ಒಡ್ಡೇದಗುಳಿ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಕಟಪೂರ್ವ ಕಾರ್ಯದರ್ಶಿ ಹಾಗೂ ಮಂಗಳೂರು ಮಂಡಲದ ಬಿ.ಎಲ್ ಪ್ರಭಾರಿಯಾಗಿರುವ ಜಯಶ್ರೀ ಕರ್ಕೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಂಗಳೂರು ಮಂಡಲ ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಪೂಜಾರಿ, ಹರೇಕಳ 10 ಸಮಸ್ತ ಯಕ್ಷಗಾನ ಮಂಡಳಿಯ ನೂತನ ಅಧ್ಯಕ್ಷ ಸುಭಾಷ್ ರೈ ಕಲಾಯಿ, ಹಿಂದೂ ರುದ್ರಭೂಮಿಯ ಮಾಜಿ ಕಾರ್ಯದರ್ಶಿ ಜನಾರ್ದನ ಆಚಾರ್ಯ, ನೂತನ ಅಧ್ಯಕ್ಷ ಬಾಲಕೃಷ್ಣ ಕುಲಾಲ್, ಕೋಶಾಧಿಕಾರಿ ಪ್ರಸಾದ್ ರೈ ಕಲಾಯಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕಲಾಯಿ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹೇಮಲತಾ, ಮಂಗಳೂರು ಮಂಡಲ ಮುನ್ನೂರು ಮಹಾಶಕ್ತಿ ಕೇಂದ್ರದ ಮಾಜಿ ಕಾರ್ಯದರ್ಶಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಅದೇ ರೀತಿ ಮಂಗಳೂರು ಮಂಡಲದ 60ನೇ ಬೂತ್ ಅಧ್ಯಕ್ಷ ಗೋಪಾಲಕೃಷ್ಣ, 60ನೇ ಬೂತ್ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಆಯೋಜಕ ಸುಖಾನಂದ ಶೆಟ್ಟಿ ಕಲಾಯಿ, 59ನೇ ಬೂತ್ ಅಧ್ಯಕ್ಷ ರಕ್ಷಕ್ ಮಾನೈ, ಹರೇಕಳ ಗ್ರಾಮದ ಸೇವಾ ಪ್ರತಿನಿಧಿ ಲತಾ ಮಾನೈ, ಮಂಗಳೂರು ಮಂಡಲದ ಮಹಿಳಾ ಮೋರ್ಚಾ ಸದಸ್ಯೆ ಕವಿತಾ ಸುಖಾನಂದ ಶೆಟ್ಟಿ ಕಲ್ಲಾಯಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ದಯಾನಂದ ನಾಯ್ಕ್, ವಲೇರಿಯನ್, ಪೋಸ್ಟ್‌ಮ್ಯಾನ್
ಸುರೇಶ್ ಹಾಗೂ ಬಷೀರ್ ಸೇರಿದಂತೆ ಸ್ಥಳೀಯರು ಸಹಕಾರ ನೀಡಿದ್ದಾರೆ. ಒಡ್ಡೇದಗುಳಿ ದಿನಸಿ ವ್ಯಾಪಾರಸ್ಥರಾದ ಅಜೀದ್ ಕೂಡ ಕಾರ್ಯಕ್ರಮಕ್ಕೆ ಸಹಕರಿಸಿದ್ರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶಭಕ್ತಿ ಹಾಗೂ ರಾಷ್ಟ್ರದ ಏಕತೆ, ಅಖಂಡತೆ ಮತ್ತು ಪ್ರಗತಿಯ ಕುರಿತು ಸಂದೇಶ ನೀಡಲಾಯಿತು. ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
