ನಾಗರಪಂಚಮಿ ಅಂದ್ರೆ ತುಳುನಾಡಿನ ಜನರಿಗೆ ವಿಶೇಷವಾದ ಹಬ್ಬ. ಈ ಬಾರಿ ನಾಗರಪಂಚಮಿ ಇನ್ನಷ್ಟು ವಿಶೇಷವಾಗಿದ್ದು, ಸಮಸ್ತ ತುಳುನಾಡಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಇದೇ ಮೊದಲ ಬಾರಿಗೆ ನಾಗರಪಂಚಮಿ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ, ಉಳ್ಳಾಲ ಬೈಲಿನ ಮೇಗಿನಮನೆ ಬಂಗೇರ ತರವಾಡಿನಲ್ಲಿ ಸಮಸ್ತ ಹಿಂದೂ ಬಾಂಧವರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಅಧ್ಯಕ್ಷರಾದ ಪ್ರಕಾಶ್ ಎಂ. ಉಳ್ಳಾಲ್ ಸೇರಿದಂತೆ ಅನೇಕ ಹಿಂದೂ ಬಾಂಧವರು ಉಪಸ್ಥಿತರಿದ್ದು, ನಾಗದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ನಾಗರಪಂಚಮಿಯ ಈ ಶುಭ ಸಂದರ್ಭದಲ್ಲಿ ಸಾರ್ವತ್ರಿಕ ರಜೆ ಘೋಷಿಸಿದ ಸಚಿವ ಯು.ಟಿ. ಖಾದರ್ ಅವರಿಗೆ ನಾಗದೇವರು ಆಯುರಾರೋಗ್ಯ, ಸುಖ-ಸಮೃದ್ಧಿ ಕರುಣಿಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸಲಾಯಿತು.
