Site icon Ullalavani

ಭಾಷಣಗಳಿಗೆ ಮರುಳಾಗದೇ ಜೀವನದ ಯಶಸ್ಸಿನ ಸುಂದರ ಕನಸುಗಳನ್ನು ಸಾಕಾರಗೊಳಿಸಿ : ಹರೀಶ್‌ ಮಡ್ಯಾರ್‌


ಮಂಗಳೂರು: ಭಾಷಣಗಳಿಗೆ ಮರುಳಾಗದಿರಿ, ಯುವಕರಿಗಾಗಿ ಸುಂದರ ಕನಸುಗಳಿವೆ. ತನ್ನ ಜೀವನದಲ್ಲಿ ಆಶಾ ನಾಯಕ್‌, ದಿನಕರ್‌, ಶೆಟ್ಟಿ, ವಿನೋದ್‌ ಪೈ, ಜೀವನ್‌ ರಂತಹ ವಕೀಲರ ತಂಡ ಸಹಕರಿಸಿದರಿಂದಾಗಿ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸುವಂತೆ ಸಾಧ್ಯವಾಗಿದೆ . ಕಷ್ಟದ ದಿನಗಳ ಕಾಲ ಪ್ರಕರಣದ ಮೇಲೆ ಪ್ರಕರಣಗಳು ಬಿದ್ದಾಗ ಇಂತಹ ವಕೀಲರೇ ಶುಲ್ಕವಿಲ್ಲದ ಕೈಹಿಡಿದು ಜೀವನದ ಪಾಠ ಕಲಿಸಿದವರು ಎಂದು ಕೋಟೆಕಾರು ಪಟ್ಟಣ ಪಂಚಾಯತ್‌ ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್‌ ಅಭಿಪ್ರಾಯಪಟ್ಟರು.
ಅವರು 1943 ರಲ್ಲಿ ಆರಂಭವಾದ ಹಳೇಯ ಶ್ರೀ ಪರಂಜ್ಯೋತಿ ಭಜನಾ ಮಂಡಳಿ ಅಳಪೆ ಇದರ ನೇತೃತ್ವದಲ್ಲಿ ಜರಗಿದ 80 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಮನುಷ್ಯ ಏಕಾಂತದಲ್ಲಿ ಕೆಲವು ನಿಮಿಷ ಕುಳಿತು ಈ ಸಮಾಜದಲ್ಲಿ ನಾನೇನು ಎಂಬುದನ್ನು ಪ್ರಶ್ನೆ ಮಾಡಿದಾಗ ಎಲ್ಲಾ ವಿಚಾರಗಳು ಸಂಪೂರ್ಣವಾಗಿ ತಿಳಿಯುತ್ತದೆ ಇದರ ಮೂಲಕ ಮನುಷ್ಯ ಉತ್ತಮ ಗುಣನಡತೆಯನ್ನು ಸಮಾಜದಲ್ಲಿ ಗಳಿಸಲು ಸಾಧ್ಯವಾಗುತ್ತದೆ . ಅಲ್ಲದೆ ಸ್ವಾತಂತ್ರಗೋಸ್ಕರ ಹೋರಾಟಗೈದ ಅನೇಕ ಹೋರಾಟಗಾರರ ಸಾಹಸಗಾಥೆಯನ್ನು ಎಲ್ಲರೂ ಸ್ಮರಿಸುವಂತಾಗಬೇಕು ಎಂದರು.
ಮಂದಿರದ ಅಧ್ಯಕ್ಷರು ನ್ಯಾಯವಾದಿ ದಿನಕರ್ ಶೆಟ್ಟಿ, ಗೌರವಾಧ್ಯಕ್ಷರಾದ ಶಾಂಭವಿ ಜನಾರ್ಧನ್, ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್, ಉಪಾಧ್ಯಕ್ಷರಾದ ವನಿತಾ ಅರುಣ್, ಕೋಶಾಧಿಕಾರಿಯಾದ ಹೇಮಾ ಪ್ರಕಾಶ ಹೆಗ್ಡೆ, ಅರ್ಚಕರಾದ ರಾಮಚಂದ್ರ ಕೊಟ್ಟಾರಿ, ವಾಣಿ ಉಪೇಂದ್ರ ಆಚಾರ್ಯ,ಸಮಾಜ ಸೇವಕರಾದ ಸುಕೇಶ್ ಅಳಪೆ, ದಿನೇಶ್ ಅಳಪೆ, ತಿಲಕ್ ರಾಜ್ ಅಳಪೆ, ಸೇವಾ ಸಮಿತಿ ಪ್ರಮುಖರಾದ ಚರಣ್ ಕೊಟ್ಟಾರಿ , ಮಿಥುನ್ ದೇವಾಡಿಗ, ರಾಜೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಹೇಮಾ ಪ್ರಕಾಶ್ ಹೆಗ್ಡೆ ಸ್ವಾಗತಿಸಿದರು. ವನಿತಾ ಅರುಣ್ ವಂದಿಸಿದರು.

Exit mobile version