Site icon Ullalavani

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬೆಲೆಯನ್ನುಅರಿತುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ : ಕೆ.ಟಿ.ಸುವರ್ಣ


ತೊಕ್ಕೊಟ್ಟು: ವಿದೇಶಿ ಬ್ರಿಟಿಷರ ಗುಲಾಮಗಿರಿಯಿಂದ ಭಾರತವನ್ನು ಮುಕ್ತಗೊಳಿಸಲು ಅಸಂಖ್ಯಾತ ದೇಶಪ್ರೇಮಿಗಳು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಅರ್ಪಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಹೋರಾಟ ಮತ್ತು ದೇಶಪ್ರೇಮದ ಫಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಗೌರವದಿಂದ ಬದುಕುತ್ತಿದ್ದೇವೆ. ಅವರ ತ್ಯಾಗದ ಬೆಲೆಯನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಸಮೃದ್ಧಿ ಹೌಸಿಂಗ್‌ ಸೊಸೈಟಿ ಗೌರವಾಧ್ಯಕ್ಷರು , ಸಹ್ಯಾದ್ರಿ ಕೋಆಪರೇಟಿವ್‌ ಸೊಸೈಟಿ ಇದರ ಅಧ್ಯಕ್ಷರಾದ ಕೆ.ಟಿ.ಸುವರ್ಣ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಗಣೇಶನಗರದ ಸಮೃದ್ಧಿ ಹೌಸಿಂಗ್‌ ಸೊಸೈಟಿ ಇಲ್ಲಿ ಸ್ವಾತಂತ್ರ್ಯ ದಿನದ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂಧರ್ಭ ಸೊಸೈಟಿಯ ಕೋಶಾಧಿಕಾರಿ ರಾಜೇಶ್ ಕೆರೆಬೈಲು, ಉಪಾಧ್ಯಕ್ಷ ರಾದ ಬಾಲಕೃಷ್ಣ, ಸೂರ್ಯಪ್ರಕಾಶ್ ಪಕಳ, ಅರುಣ್ ಕುಮಾರ್, ರವಿ, ಸುಚಿತ್ರಾ ಮತ್ತು ಸದಸ್ಯರು ಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪ್ರಯುಕ್ತ ಸಿಹಿತಿಂಡಿ ಮತ್ತು ಲಘು ಉಪಹಾರ ನೀಡಲಾಯಿತು.

Exit mobile version