Site icon Ullalavani

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ ಇದರ ಜಂಟಿ ಆಶ್ರಯದಲ್ಲಿ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ದಸರಾ ಪ್ರಯುಕ್ತ ಶಾರದನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟದಲ್ಲಿ ರಾಕೇಶ್ ಪುತ್ರನ್ ಶಾರದ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ವಿಜಯ್ ಶಾರದಾ ಶ್ರೀ ಪ್ರಶಸ್ತಿ ಮತ್ತು ಮಂಜುನಾಥ್, ಶಾರದಾ ಕಿಶೋರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಕುಸ್ತಿ ಪಂದ್ಯಾಟದ 74 ಕೆ.ಜಿ.ವಿಭಾಗದಲ್ಲಿ ಅಂಜನೇಯ ಸಸಿಹಿತ್ಲುವಿನ ರಾಕೇಶ್ ಪುತ್ರನ್ ಅವರು ವೀರಭಾರತಿ ಬೆಂಗ್ರೆಯ ಸುಮಿತ್ ಅವರನ್ನು ಸೋಲಿಸಿ ಶಾರದಾ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡರೆ 60 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ವಿಜಯ್ ಅವರು ಕೆ.ಎಂ. ಚಿತ್ರಾಪುರದ ಹನುಮಂತ ಅವರನ್ನು ಸೋಲಿಸಿ ಶಾರದಾ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. 36 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ನಾಗರಾಜ್ ಅವರನ್ನು ಸೋಲಿಸಿ ಅದೇ ತಂಡದ ಮಂಜುನಾಥ್ ಕಿಶೋರ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು.

ಪಲಿತಾಂಶ ವಿವರ :
42 ಕೆ.ಜಿ. ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ಹನುಮಂತ (ಪ್ರಥಮ) ಕೆ. ಎಂ. ಚಿತ್ರಾಪುರದ ಶಿವರಾಜ್ (ದ್ವಿತೀಯ), 47 ಕೆ.ಜಿ. ವಿಭಾಗದಲ್ಲಿ ಡಿ.ಪಿ.ಚಿತ್ರಾಪುರದ ನಾಗರಾಜ್ (ಪ್ರಥಮ), ಶಿವಾಜಿ ಫಿಸಿಕಲ್ ಬೋಳಾರದ ಪ್ರಜ್ವಲ್ (ದ್ವಿತೀಯ), 50 ಕೆ.ಜಿ. ವಿಭಾಗದಲ್ಲಿ ಡಿ.ಪಿ.ಚಿತ್ರಾಪುರದ ಬಾಲರಾಜ್ (ಪ್ರಥಮ), ವಿದ್ಯಾಭಾರತಿ ಬೆಂಗ್ರೆಯ ಮಂಜು(ದ್ವಿತೀಯ), 55 ಕೆ.ಜಿ.ವಿಭಾಗದಲ್ಲಿ ಶಿವಾಜಿ ಫಿಸಿಕಲ್ ಬೋಳಾರದ ಸುಪ್ರಿತ್(ಪ್ರಥಮ), ಡಿ.ಪಿ.ಚಿತ್ರಾಪುರದ ರವಿ (ದ್ವಿತೀಯ), 66ಕೆ.ಜಿ. ವಿಭಾಗದಲ್ಲಿ ಡಿ.ಪಿ ಚಿತ್ರಾಪುರದ ವಿತೇಶ್ (ಪ್ರಥಮ), ಶಿವರಾಜ್(ದ್ವಿತೀಯ), 84 ಕೆ.ಜಿ. ವಿಭಾಗದಲ್ಲಿ ವಿ.ಬಿ.ಬೆಂಗ್ರೆಯ ಅಜಯ್ ಅಮೀನ್(ಪ್ರಥಮ), ಶಿವಾಜಿ ಫಿಸಿಕಲ್ ಬೋಳಾರದ ಕಿರಣ್ ರಾವ್ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಬ್ಬಕ್ಕ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಲಯನ್ಸ್ ಕ್ಲಬ್ ಜಿಲ್ಲಾ ಕಾರ್ಯಕ್ರಮ ಸಂಯೋಜಕ ದೇವದಾಸ್ ಭಂಡಾರಿ, ವಿಜಯ ಬ್ಯಾಂಕ್ ಸುರತ್ಕಲ್‍ನ ವ್ಯವಸ್ಥಾಪಕ ದೇವದಾಸ್ ಆಳ್ವ, ಲಯನ್ಸ್ ಕ್ಲಬ್ ಉಳ್ಳಾಲ ವಲಯ ಅಧ್ಯಕ್ಷ ರಾಜೇಶ್ ಶೆಟ್ಟಿ ಶಬರಿ, ಮಾರುತಿ ಯುವಕ ಮಂಡಲದ ಅಧ್ಯಕ್ಷ ಕಿರಣ್ ಪುತ್ರನ್, ದ.ಕ.ಜಿಲ್ಲಾ ಗಾಣಿಗರ ಸಂಘ ಯುವ ವಿಭಾಗದ ಅಧ್ಯಕ್ಷ ರಂಜನ್ ಕುಮಾರ್ ಅತ್ತಾವರ, ಲಯನ್ಸ್ ಕ್ಲಬ್ ಅಶೋಕ ನಗರ ಮಂಗಳೂರು ಇದರ ಅಧ್ಯಕ್ಷ ದಿನೇಶ್ ಕರ್ಕೇರ, ವಿಜಯಬ್ಯಾಂಕ್ ಬೆಂಗಳೂರು ಇದರ ಶಾಖಾ ವ್ಯವಸ್ಥಾಪಕ ಕೃಷ್ಣ ರಾಜ್ ಎಂ. ಪುತ್ರನ್, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮಧುರಾಜ್ ಅಮೀನ್, ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ರೋಹಿದಾಸ್ ಬಂಗೇರ, ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ, ಗೌರವಾಧ್ಯಕ್ಷ ಕಿಶೋರ್ ಕಾಂಚನ್, ರಾಜೇಶ್ ಬಂಗೇರ, ದಯಾನಂದ್ ಬಂಗೇರ, ಯಶವಂತ ಅಮೀನ್, ಭಾನುಪ್ರಕಾಶ್ ಪುತ್ರನ್, ಸುದರ್ಶನ್ ಪುತ್ರನ್, ರವಿರಾಜ್ ಪುತ್ರನ್, ಮನೋಜ್ ಬಂಗೇರ, ಭರತ್ ಪುತ್ರನ್, ನವೀನ್ ಪುತ್ರನ್, ತಿಲಕ್ ಎಸ್. ಬಂಗೇರ, ಅರುಣ್ ಪುತ್ರನ್, ರವಿಚಂದ್ರ ಉಳ್ಳಾಲ್, ಅಶ್ವತ್ ಪುತ್ರನ್,ಗುರು ಪ್ರಸಾದ್ ಪುತ್ರನ್, . ವಿಶ್ವನಾಥ ಬಂಗೇರ ವಿನೋದ್ ಬಂಗೇರ, ರಾಜೇಶ್ ಪುತ್ರನ್ ಉಪಸ್ಥಿತರಿದ್ದರು.

Exit mobile version