ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೊಣಾಜೆ ಶಾರದಾನಗರದ ಸಪ್ತಸ್ವರ ಕಲಾತಂಡ ಕೊಣಾಜೆ ಮತ್ತು ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆಯವ ಸಾರ್ವಜನಿಕ ಶಾರದೋತ್ಸವ ಅ. 19ಮತ್ತು 20ರಂದು ಕೊಣಾಜೆ ಶಾರದಾ ನಗರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಗ್ರಾಮ ಗೌರವ, ಹಿರಿಯರಿಗೆ ಗೌರವ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 9.00ರಿಂದ ಗೆಜ್ಜೆದ ಪೂಜೆ ಯಕ್ಷಗಾನ ಬಯಲಾಟ ನಡೆಯಲಿದ್ದು, ಅ. 20ರಂದು ಮಂಗಳವಾರ ಬೆಳಗ್ಗೆ ಭಜನಾ ಸಂಕೀರ್ತನೆ ಉದ್ಘಾಟನೆ, ಅಕ್ಷರಾಭ್ಯಾಸ, ಸಂಜೆ 4.30ಕ್ಕೆ ಶೋಭಾಯಾತ್ರೆ ನಡೆಯಲಿದೆ ಎಂದು ಕಲಾತಂಡದ ಪ್ರಕಟನೆ ತಿಳಿಸಿದೆ.