ಅಡ್ಕರೆ ಪಡ್ಪು: ಅಡ್ಕರೆ ಪಡ್ಪುವಿನ ಅಲ್ ಇಹ್ಸಾನ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಂಘಟನೆಯ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾಹಿ ಸಅದಿ ಮೇನಾಲ ಅವರು ದುವಾ ನೆರವೇರಿಸಿ, ಸ್ವಾತಂತ್ರ್ಯದ ಮಹತ್ವ ಹಾಗೂ ದೇಶದ ಬಗ್ಗೆ ಪ್ರತಿಯೊಬ್ಬರ ಜವಾಬ್ದಾರಿಯ ಕುರಿತು ಸಂದೇಶ ನೀಡಿದರು. ರಹ್ಮಾನಿಯ ಮದರಸ ಅಡ್ಕರೆಯ ಸದರ್ ಉಸ್ತಾದ್ ಮೊಹಮ್ಮದ್ ಹನೀಫ್ ಸಅದಿ ಬದ್ಯಾರ್ ಹಾಗೂ ಎಂ.ಜೆ.ಎಂ. ಅಧ್ಯಕ್ಷ ಅಬ್ದುಲ್ ಖಾದರ್ ಶುಭಾಶಯ ನುಡಿದರು.
ಕಾರ್ಯಕ್ರಮದಲ್ಲಿ ಎಂ.ಜೆ.ಎಂ. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಸ್ತಫಾ, ಅಬ್ದುಲ್ ಹಮೀದ್ ಮದನಿ ಬದ್ಯಾರ್, ಅಬ್ದುಲ್ ಹಮೀದ್ ಮದನಿ ಕುಂತೂರ್, ಕೆ.ಎಚ್. ಇಸ್ಮಾಯಿಲ್ ಮುಸ್ಲಿಯಾರ್ ಅಡ್ಕರೆ, ದಫ್ ಸಮಿತಿ ಅಧ್ಯಕ್ಷ ಅಬ್ಬಾಸ್ ಬಾಕಿಮಾರ್, ಅಲ್ ಇಹ್ಸಾನ್ ಗೌರವಾಧ್ಯಕ್ಷ ಅಬೂಬಕರ್, ಅಡ್ಕರೆ ಫೌಂಡೇಶನ್ ಚೇರ್ಮನ್ ಕೆ.ಬಿ. ಹುಸೈನ್, ಎಂ.ಜೆ.ಎಂ. ಮಸೀದಿ ಉಸ್ತುವಾರಿ ರಹೀಂ ಸೈಟ್, ಎಸ್‌ಎಸ್‌ಎಫ್ ಅಧ್ಯಕ್ಷ ಕರೀಂ, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಿಯಾಝ್ ಸೇರಿದಂತೆ ಅಲ್ ಇಹ್ಸಾನ್‌ನ ಅಶ್ರಫ್ ಮುಲಾರ, ರವೂಫ್ ಮೆಲೆಪಡ್ಪು, ರವೂಫ್ ಮುಲಾರ, ನಿಯಾಝ್ ಸೈಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಲ್ ಇಹ್ಸಾನ್ ಪ್ರಧಾನ ಕಾರ್ಯದರ್ಶಿ ನಝೀರ್ ಅಬ್ದುಲ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಮ್ಮದ್ ಸಿರಾಜ್ ಧನ್ಯವಾದ ಸಮರ್ಪಿಸಿದರು.