Site icon Ullalavani

ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಪೋಷಕರ ದಿನಾಚರಣೆ: ವಂಶವೃಕ್ಷ ಸ್ಪರ್ಧೆ

ಮಂಗಳೂರು: ರಾಷ್ಟ್ರೀಯ ಪೋಷಕರ ದಿನಾಚರಣೆಯ ಅಂಗವಾಗಿ ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಕಬ್ಸ್ ಮತ್ತು ಬುಲ್‌ಬುಲ್ಸ್ ಮಕ್ಕಳಿಗಾಗಿ ‘ವಂಶವೃಕ್ಷ’ (Family Tree) ಸ್ಪರ್ಧೆಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಅಲೋಶಿಯಸ್ ಡಿ’ಸೋಜಾ ವಹಿಸಿದ್ದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬದ ಮೌಲ್ಯಗಳು, ಕುಟುಂಬ ಸದಸ್ಯರ ಮಹತ್ವ ಹಾಗೂ ತಮ್ಮ ಕುಟುಂಬದ ಹಿನ್ನೆಲೆಯನ್ನು ತಿಳಿದುಕೊಳ್ಳುವ ಅಗತ್ಯವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಬ್ಸ್ ಶಿಕ್ಷಕಿ ಪೂರ್ಣಿಮಾ ಹಾಗೂ ಬುಲ್‌ಬುಲ್ಸ್ ಶಿಕ್ಷಕಿ ತ್ರಿವೇಣಿ ಉಪಸ್ಥಿತರಿದ್ದು, ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ಕುಟುಂಬದ ಸದಸ್ಯರನ್ನು ಪರಿಚಯಿಸುವ ರೀತಿಯಲ್ಲಿ ಸೃಜನಾತ್ಮಕವಾಗಿ ವಂಶವೃಕ್ಷಗಳನ್ನು ತಯಾರಿಸಿ ಪ್ರದರ್ಶಿಸಿದರು.

ಸ್ಪರ್ಧೆಯು ಮಕ್ಕಳಲ್ಲಿ ಕುಟುಂಬದ ಬಗ್ಗೆ ಅರಿವು, ಹಿರಿಯರ ಬಗ್ಗೆ ಗೌರವ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಯಿತು. ಪೋಷಕರ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮ ಮಕ್ಕಳಿಗೆ ಕುಟುಂಬದ ಮಹತ್ವವನ್ನು ಅರಿಯುವ ಉತ್ತಮ ವೇದಿಕೆಯಾಯಿತು.

Exit mobile version