Site icon Ullalavani

ತೊಕ್ಕೊಟ್ಟಿನಲ್ಲಿ ಬಿಜೆಪಿ ಮಂಗಳೂರು ಮಂಡಲದಿಂದ 80ನೇ ಸ್ವಾತಂತ್ರ್ಯೋತ್ಸವ

ತೊಕ್ಕೊಟ್ಟು: ಬಿಜೆಪಿ ಮಂಗಳೂರು ಮಂಡಲದ ತೊಕ್ಕೊಟ್ಟು ಮುಖ್ಯ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಧ್ವಜಾರೋಹಣ ನೆರವೇರಿಸಿ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಹಾಗೂ ಬಲಿದಾನಗೈದ ಮಹನೀಯರನ್ನು ಸ್ಮರಿಸುವುದರೊಂದಿಗೆ, ಪ್ರಧಾನಿಯವರ ಕನಸಿನ ವಿಕಸಿತ ಭಾರತದ ಸಂಕಲ್ಪದೊಂದಿಗೆ ಅಭಿವೃದ್ಧಿಯ ಹೊಸ ಪಥದಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಹೇಳಿದರು.

ಆತ್ಮನಿರ್ಭರತೆ, ಆಧುನಿಕ ತಂತ್ರಜ್ಞಾನ, ಬಲಿಷ್ಠ ಮೂಲಸೌಕರ್ಯ, ಯುವಶಕ್ತಿ ಹಾಗೂ ಜನಕೇಂದ್ರಿತ ಅಭಿವೃದ್ಧಿಯ ಮೂಲಕ ಭಾರತ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಬೆಳೆಯುತ್ತಿದೆ. ‘ವಿಕಸಿತ ಭಾರತ–ಬೆಳೆಯುತ್ತಿರುವ ಭಾರತ’ ಎಂಬ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಬೇಕು. ಒಗ್ಗಟ್ಟಿನಿಂದ, ಪ್ರಗತಿಯೊಂದಿಗೆ ಹಾಗೂ ಸಮೃದ್ಧಿಯತ್ತ ಭಾರತವನ್ನು ಮುನ್ನಡೆಸೋಣ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಮಾಧ್ಯಮ ಸಹಪ್ರಮುಖ್ ಹೇಮಂತ್ ಶೆಟ್ಟಿ ದೇರಳಕಟ್ಟೆ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಿರಾಜ್ ಮುಡಿಪು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರಿಯಪ್ಪ ಸಾಲಿಯಾನ್ ಹಾಗೂ ಹರೀಶ್ ಪೂಜಾರಿ ಆಂಬ್ಲಮೊಗರು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಮಿತ್ರನಗರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಡಲ ಉಪಾಧ್ಯಕ್ಷ ರವಿ ಶಂಕರ್ ಸೋಮೇಶ್ವರ, ಮಂಡಲ ಕಾರ್ಯದರ್ಶಿಗಳಾದ ಸುರೇಖಾ ಮುನ್ನೂರು, ಕಿಶೋರ್ ಕುತ್ತಾರು, ಭರತ್ ಗಟ್ಟಿ ಕೊಣಾಜೆ ಹಾಗೂ ರಾಜೇಶ್ ಜಾಲಹಿತ್ಲು, ಮಂಡಲ ಕಚೇರಿ ಕಾರ್ಯದರ್ಶಿ ಸುಜಾತ ಬಿ. ಶೆಟ್ಟಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ, ಯುವ ಮೋರ್ಚಾ ಅಧ್ಯಕ್ಷ ಮುರಳೀಧರ ಕೊಣಾಜೆ, ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಹಾಗೂ ಸಾಮಾಜಿಕ ಜಾಲತಾಣ ಸಂಚಾಲಕ ಗಣೇಶ್ ಭಂಡಾರಿ ನಡಾರ್ ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಪ್ನ ಶೆಟ್ಟಿ ಹಾಗೂ ವಿನುತಾ ದೇವಾಡಿಗ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಕಾಫಿಕಾಡ್, ಉಪಾಧ್ಯಕ್ಷ ಮನ್ವಿತ್ ಕಾಪಿಕಾಡ್, ಸಾಮಾಜಿಕ ಜಾಲತಾಣ ಪ್ರಮುಖ್ ಪ್ರಖ್ಯಾತ್ ತಲಪಾಡಿ, ಸದಸ್ಯ ಧನ್ ರಾಜ್ ಶೆಟ್ಟಿಗಾರ್ ಕೊಣಾಜೆ, ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಆಶಾ ಶೆಟ್ಟಿ ತಲಪಾಡಿ ಹಾಗೂ ಜಯಶ್ರೀ ಕೊಲ್ಯ, ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಮಾಡೂರು ಹಾಗೂ ಸುಮಿತ್ರ ಆಚಾರ್ಯ, ಸಾಮಾಜಿಕ ಜಾಲತಾಣ ಪ್ರಮುಖ್ ವಾಣಿ ಗೌಡ, ಸದಸ್ಯರಾದ ಆಶಾ ಗಟ್ಟಿ, ಕಚೇರಿ ಸಿಬ್ಬಂದಿ ಶಿಲ್ಪಾ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ವಕೀಲ ಮೋಹನ್ ರಾಜ್ ಕೆ.ಆರ್. ಸ್ವಾಗತಿಸಿ ಪ್ರಸ್ತಾವನೆ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ವಂದಿಸಿದರು.

Exit mobile version