Site icon Ullalavani

ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಬಟ್ಟೆದಡಿ ಕುತ್ತಾರು ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಬಟ್ಟೆದಡಿ ಕುತ್ತಾರು ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಧ್ವಜಾರೋಹಣವನ್ನು ಹಿರಿಯರಾದ ಕಮಲ ಗುಡ್ಡೆಮನೆ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಪತ್ರಿಕೆಯ ಉಳ್ಳಾಲ ತಾಲೂಕು ವರದಿಗಾರರಾದ ಮೋಹನ್ ಕುತ್ತಾರು , ಮೆಸ್ಕಾಂ ನೌಕರರಾದ ವಸಂತ್ ಪನೀರ್, ಯುವ ಉದ್ಯಮಿಗಳಾದ ಅನಿಲ್ ವೇಗಸ್ , ಮೊಹಮ್ಮದ್ ತೌಹೀದ್ ಅನ್ಸಾರಿ ಗೌರವ ಅಧ್ಯಕ್ಷರಾದ ಶ್ರೀಧರ್ ಸಾಲ್ಯಾನ್, ಸಂಸ್ಥೆಯ ಅಧ್ಯಕ್ಷರಾದ ಚಂದ್ರಹಾಸ್ ಡಿ, ಸಂಸ್ಥೆಯ ಮಹಿಳಾ ಸಮಿತಿ ಅಧ್ಯಕ್ಷರಾದ ಸುಮಿತ್ರಾ ಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ತಿಲಕ್ ತೇವುಲ, ನಿಖಿತಾ ತೇವುಲ,ರಕ್ಷಣ್ ಸಿ ಎಸ್ ,ಪ್ರತೀಕ್ಷಾ ಬಾಕಿಮಾರ್ ,ತ್ರಿಶಾ ಕೆ,ಸುವನ್ ಪ್ರಸಾದ್, ಗೌತಮ್ ಪಡ್ಪು ,ತ್ರಿಶಾನಿ ತೇವುಲ, ದೇವಿಕಾ ಇವರುಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಅಡ್ವಕೇಟ್ ನಿತಿನ್ ಕುತ್ತಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮ ನಿರೂಪಣೆಯನ್ನು ಉದಯ್ ಮದಕ ನೆರವೇರಿಸಿದರು.


ಸಂಸ್ಥೆಯ ಕಾರ್ಯದರ್ಶಿ ವಂಶಿಕ್ ಗಾಣದ ಮನೆ ಸ್ವಾಗತಿಸಿ, ಮಹಿಳಾ ಸಮಿತಿ ಕಾರ್ಯದರ್ಶಿ ಅನುಷಾ ದೆಪ್ಪೆಲಿಮಾರ್ ವಂದಿಸಿದರು.

Exit mobile version