Site icon Ullalavani

ಬಗಂಬಿಲ ಫ್ರೆಂಡ್ಸ್ ಸರ್ಕಲ್ ಬಗಂಬಿಲ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಬಗಂಬಿಲ ಫ್ರೆಂಡ್ಸ್ ಸರ್ಕಲ್ (ರಿ ) ಬಗಂಬಿಲ, ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರು ಹಾಗೂ ಬಗಂಬಿಲ ವಾರ್ಡ್ ಸದಸ್ಯರಾದ ಪ್ರವೀಣ್ ಐ ಬಗಂಬಿಲ ಅವರು ಧ್ವಜಾವರೋಹಣ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಗಂಬಿಲ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರಾದ ಗಿಲ್ಬರ್ಟ್ ಆಫೋಸ್ ಬಗಂಬಿಲ, ಬಗಂಬಿಲ ಶ್ರೀ ಮಹಾದೇವಿ ಮಂದಿರದ ಅರ್ಚಕರಾದ ಬಾಲಕೃಷ್ಣ ಪೂಜಾರಿ, ಹಿಂದು ಯುವಸೇನೆಯ ಗೌರವಾಧ್ಯಕ್ಷರಾದ ಉದಯರಾಜ್ ಶೆಟ್ಟಿ, ಬಗಂಬಿಲ ಹಿಂದು ಯುವಸೇನೆಯ ಅಧ್ಯಕ್ಷ ಪ್ರವೀಣ್ ದಾಸ್ ಬಗಂಬಿಲ, ಬಿ ಎಫ್ ಸಿ ಯ ಅಧ್ಯಕ್ಷ ಮಿತ್ರೆಶ್ ಬಗಂಬಿಲ ಹಾಗೂ ಹಿರಿಯರಾದ ರವಿಚಂದ್ರನ್,ಕುಂಪಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ಪ್ರವೀಣ್ ಐ ಬಗಂಬಿಲ ಅವರಿಗೆ ಬಗಂಬಿಲ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ನಂತರ ಸ್ಕಂದನ ಅವರ ಭಾಷಣ ಕೇಂದ್ರ ಬಿಂದುವಾಗಿತ್ತು. ಊರಿನ ಹಿರಿಯರು,ಶಾಲೆಯ ಮಕ್ಕಳು, ಬಗಂಬಿಲ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ಭಾಗವಹಿಸಿದ್ದರು. ತ್ರೀಷ ರವರು ಪ್ರಾರ್ಥನೆ ಮಾಡಿದರು. ಕರಣ್ ಬಗಂಬಿಲ ಕಾರ್ಯಕ್ರಮ ನಿರೂಪಿಸಿದರು.

Exit mobile version