ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅನಸ್ತೀಶಿಯಾ ವಿಭಾಗದ ವತಿಯಿಂದ ಜಾಗತಿಕ ಅನಸ್ತೀಶಿಯಾ ದಿನಾಚರಣೆ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾ„ಪತಿ ಡಾ| ಶಾಂತಾರಾಮ ಶೆಟ್ಟಿ ಉದ್ಘಾಟಿಸಿ ಶಸ್ತ್ರಚಿಕಿತ್ಸೆಯ ಆಧುನಿಕ ಬೆಳವಣಿಗೆಯಲ್ಲಿ ಅನಸ್ತೀಶಿಯಾದ ಪಾತ್ರದ ಕುರಿತು ಮಾಹಿತಿ ನೀಡಿದರು.
ಅನಸ್ತೀಶಿಯಾ ವಿಭಾಗದ ಪ್ರಾಧ್ಯಾಪಕ ಡಾ| ರವೀಂದ್ರ ಯು.ಎಸ್. ಅವರು `ನೋವು ಶಮನ’ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಸಪ್ರಶ್ನೆಯಲ್ಲಿ ವಿಜೇತರಾದ ಗೃಹವೈದ್ಯರಿಗೆ ಬಹುಮಾನ ವಿತರಿಸಲಾಯಿತು.
ಡಾ| ಮುರಳಿ ಶಂಕರ್ ಭಟ್ ಹಾಗೂ ಡಾ| ಗೋವಿಂದರಾಜ್ ಭಟ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಕ್ಷೇಮ ಅನಸ್ತೀಶಿಯಾ ವಿಭಾಗದ ಮುಖ್ಯಸ್ಥ ಡಾ| ಆನಂದ ಬಂಗೇರ ಸ್ವಾಗತಿಸಿದರು. ಡಾ| ಅವನೀಶ್ ಭಂಡಾರಿ ವಂದಿಸಿದರು. ಡಾ| ರೋಲಿಟಾ ಲೋಬೋ ಕಾರ್ಯಕ್ರಮ ಸಂಯೋಜಿಸಿದರು.