ಉಳ್ಳಾಲ: ಭವ್ಯ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಬಾಳೆಪುಣಿ ಮದ್ರಸ ಪರಿಸರದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮದ್ರಸ ಸದರ್ ಉಸ್ತಾದ್ ಹಾರಿಸ್ ಹನೀಫಿ ಅಲ್ ಫುರ್ಕಾನಿ ಅವರು ದುಆ ನೆರವೇರಿಸಿದರು. ಜಮಾಅತ್ ಅಧ್ಯಕ್ಷರಾದ
ಮೊಯ್ದಿನ್ ಹಾಜಿ ಅವರು ಧ್ವಜಾರೋಹಣ ನೆರವೇರಿಸಿದರು. ಸಿದ್ದೀಕ್ ಸಅದಿ ಅವರು ಪ್ರತಿಜ್ಞಾ ವಚನ ಬೋಧಿಸಿದರು. SBS ಲೀಡರ್ ಹಫ್ಸಲ್ ಸ್ವಾಗತಿಸಿದರು.
ಮದ್ರಸಾ ವಿದ್ಯಾರ್ಥಿಗಳ ಸ್ಕೌಟ್ ಪ್ರದರ್ಶನ, ರಾಷ್ಟ್ರಗೀತೆ, “ಸಾರೆ ಜಹಾಂ ಸೆ ಅಚ್ಚಾ” ಸೇರಿದಂತೆ ದೇಶಭಕ್ತಿ ಗೀತೆಗಳ ಗಾಯನವು ಅತ್ಯಂತ ಮನೋಹರವಾಗಿತ್ತು. ವಿದ್ಯಾರ್ಥಿಗಳ ಶಿಸ್ತು, ಏಕತೆ ಹಾಗೂ ದೇಶಭಕ್ತಿಯ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಜಮಾಅತ್ ಪದಾಧಿಕಾರಿಗಳು, ಮದ್ರಸ ಸ್ಟಾಫ್ ಉಸ್ತಾದರು, ಮಿಹ್ರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು, ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಕಾರ್ಯಕರ್ತರು, ವಿದ್ಯಾರ್ಥಿಗಳ ಪೋಷಕರು, ಊರಿನ ಸ್ನೇಹಿತರು ಹಾಗೂ ಎಲ್ಲಾ ಸಹೃದಯರು ಒಗ್ಗಟ್ಟಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.