Site icon Ullalavani

ಉಳ್ಳಾಲವಾಣಿ ಲೋಗೋ ಉಪಯೋಗಿಸಿ ಸಂಸ್ಥೆಯ ಹೆಸರಿನಲ್ಲಿ ಎಡಿಟ್‌ ಮಾಡಿದ ಫೋಟೋ ಶೇರ್ — ಕಾನೂನು ಕ್ರಮದ ಎಚ್ಚರಿಕೆ

ನಮ್ಮ ಉಳ್ಳಾಲವಾಣಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಸುದ್ದಿಯನ್ನು ತಿರುಚಿ ಹಾಗೂ ಎಡಿಟ್ ಮಾಡಿ, ನಮ್ಮ ಸಂಸ್ಥೆಯೇ ಆ ಎಡಿಟ್ ಮಾಡಲಾದ ವಿಷಯವನ್ನು ಪ್ರಕಟಿಸಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ.

ಈ ಕುರಿತು ಸ್ಪಷ್ಟಪಡಿಸುವುದೇನೆಂದರೆ, ನಮ್ಮ ಸಂಸ್ಥೆ ಪ್ರಕಟಿಸಿದ ಮೂಲ ವರದಿಯಲ್ಲಿ ಈ ಫೋಟೋ ಇರಲಿಲ್ಲ. ನಮ್ಮ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಎಡಿಟ್ ಮಾಡಲಾದ ಫೋಟೋ ಅಥವಾ ವಿಷಯವನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಆದ್ದರಿಂದ, ನಮ್ಮ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಇಂತಹ ಎಡಿಟ್ ಮಾಡಲಾದ ಫೋಟೋ ಅಥವಾ ಸುಳ್ಳು/ತಿರುಚಿದ ಮಾಹಿತಿಯನ್ನು ಸೃಷ್ಟಿಸುವ, ಪ್ರಸಾರ ಮಾಡುವ ಅಥವಾ ಫಾರ್ವರ್ಡ್ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.

ಆದ್ದರಿಂದ ಸಾರ್ವಜನಿಕರು ಯಾವುದೇ ಫೋಟೋ, ಸುದ್ದಿ ಅಥವಾ ಮಾಹಿತಿಯನ್ನು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಫಾರ್ವರ್ಡ್ ಅಥವಾ ಶೇರ್ ಮಾಡಬಾರದು.

ನಮ್ಮ ಸಂಸ್ಥೆಯ ಹೆಸರಿನಲ್ಲಿ ಹರಿದಾಡುವ ಯಾವುದೇ ಅನುಮಾನಾಸ್ಪದ ಅಥವಾ ಎಡಿಟ್ ಮಾಡಲಾದ ವಿಷಯ ಕಂಡುಬಂದಲ್ಲಿ, ದಯವಿಟ್ಟು ಅದನ್ನು ನಂಬುವ ಮೊದಲು ಅದರ ಮೂಲವನ್ನು ಪರಿಶೀಲಿಸಿ.

ಎಲ್ಲರೂ ಎಚ್ಚರಿಕೆಯಿಂದಿರಿ. ಸತ್ಯಾಸತ್ಯತೆ ಪರಿಶೀಲಿಸದೆ ಯಾವುದೇ ವಿಷಯವನ್ನು ಹಂಚಿಕೊಳ್ಳದಿರಿ.

Exit mobile version