Site icon Ullalavani

ಸಂಘಟನೆಗಳು ನಿರಂತರ ಚಟುವಟಿಕೆಗಳ ಮೂಲಕ ಜನಪರವಾಗಿರಬೇಕು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುನ್ನೂರು : ಸಂಘಟನೆಗಳು ಸ್ಥಾಪನೆಯಾದರೆ ಸಾಲದು ನಿರಂತರ ಚಟುವಟಿಕೆಯ ಮೂಲಕ ಜನಪರ ಕಾರ್ಯ ನಿರ್ವಹಿಸುವುದರೊಂದಿಗೆ ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿದಾಗ ಸಂಘಟನೆಗಳು ಯಶಸ್ವಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಗಾಳದ ಕೊಂಕಣಿ ಅಭ್ಯದಯ ಸಂಘ ಸಮಾಜಕ್ಕೆ ಮಾದರಿ ಎಂದು ಉಡುಪಿ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ ನಡೆದ `ಗಾಳದ ಕೊಂಕಣಿ ಅಭ್ಯುದಯ ಸಂಘ’ ಇದರ ಷಷ್ಠ್ಯಾಬ್ದಿ ಮಹೋತ್ಸವ ಸಂಭ್ರಮ-2015ರ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಘವು ಬೆಳೆದು ಬಂದ ಹಾದಿಯ “ನವಸೌರಭ”ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಸಂಘಗಳು ಹುಟ್ಟುವುದು ಸಾಮಾನ್ಯ ,ಆದರೆ ಅದನ್ನು ಪೋಷಿಸಿ ಬೆಳೆಸುವ ಪರಿ ಕಷ್ಟಸಾಧ್ಯ.ಸರಕಾರದ ಪ್ರತಿನಿಧಿಗಳಿಗೂ ತಮ್ಮ ಅಹವಾಲುಗಳನ್ನು ಮುಟ್ಟಿಸಲು ಸಂಘಟನೆಗಳೇ ಪ್ರಬಲ ಮಾಧ್ಯಮ. ಸಮಾಜದ ಪ್ರತಿಯೊಬ್ಬರಲ್ಲಿಯೂ ನಾಯಕತ್ವದ ಗುಣಗಳಿದ್ದು ಅದನ್ನು ಬೆಳಕಿಗೆ ತರುವ ಕಾರ್ಯ ಸಂಘಟನೆಗಳಿಂದ ನಡೆಯಬೇಕು ಎಂದ ಅವರು ಸೋಮನಾಥ ಉಳಿಯ ಕ್ಷೇತ್ರದಲ್ಲೂ ಸಮಾಜ ಭಾಂದವರು ನವರಾತ್ರಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಬರುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಗಾಳದ ಕೊಂಕಣಿ ಅಭ್ಯುದಯ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಪ್ರ.ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದ 16 ಮಂದಿ ಹಿರಿಯರನ್ನು ಮತ್ತು ಕಳೆದ 60 ವರ್ಷಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಷಷ್ಠ್ಯಾಬ್ದಿ ಆಚರಣಾ ಮಹೋತ್ಸವ ಸಮಿತಿ ಅಧ್ಯಕ್ಷ ಯು.ದಯಾನಂದ ನಾೈಕ್ ವಹಿಸಿದ್ದರು.

ಖ್ಯಾತ ಜ್ಯೋತಿಷಿ ರಾಮಚಂದ್ರ ತಚ್ಚಂಗಾಡ್ ,ಪುರೋಹಿತರಾದ ಪ್ರಶಾಂತ್ ಉಡುಪ , ಸುದರ್ಶನ್ ಬಲ್ಲಾಳ್ ನಾವೂರು, ಸಂಘದ ಅಧ್ಯಕ್ಷ ನರಸಿಂಹ ನಾೈಕ್ ಹರೇಕಳ ,ಸೋಮನಾಥ ಉಳಿಯ ಶ್ರೀ ಅರಸು ಧೂಮಾವತಿ ಬಂಟ ದೈವಸ್ಥಾನದ ಪ್ರಧಾನ ಅರ್ಚಕ ಎಸ್. ರಾಮ ನಾೈಕ್, ಮುಂಬಯಿ ಸಜ್ಜನ್ ಸೇವಾ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಬಿ. ನಾೈಕ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ನಾೈಕ್ ಮುಂಬಯಿ, ಶ್ರೀ ಸೋಮೇಶ್ವರೀ ಸೌಹಾರ್ಧ ಸಹಕಾರಿ ನಿಯಮಿತ ಸಂಘ ಇದರ ಅಧ್ಯಕ್ಷ ಉಮಾನಾಥ್ ನಾೈಕ್ ಉಳ್ಳಾಲ ,ಉದ್ಯಮಿ ಯಶವಂತ ಎಸ್.ನಾೈಕ್, ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾೈಕ್, ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ ಕೆ. ಮಂಕಿಸ್ಟ್ಯಾಂಡ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಷಷ್ಠ್ಯಾಬ್ದಿ ಆಚರಣಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ವೆಂಕಟೇಶ್ ಬಂಟ್ವಾಳ ಸ್ವಾಗತಿಸಿದರು. ಸಾಂಸ್ಕøತಿ ಕಾರ್ಯಕ್ರಮದ ಸಂಚಾಲಕಿ ಆಶಾ ಎಸ್. ನಾೈಕ್ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿ ಜಯ ನಾೈಕ್ ಪ್ರಸ್ತಾವನೆಗೈದರು. ಸುದೇಶ್ ಕುಮಾರ್ ಪಂಪ್‍ವೆಲ್ ಮತ್ತು ವಿಜೇತ , ಧನಲಕ್ಷ್ಮಿ ಎಂ. ಕಾರ್ಯಕ್ರಮ ನಿರ್ವಹಿಸಿದರು.

Exit mobile version