ಹಿಂದು ಜಾಗರಣ ವೇದಿಕೆ ಉಳ್ಳಾಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಅಖಂಡ ಭಾರತ ಸಂಕಲ್ಪ ದಿನ”ವನ್ನು ಆಗಸ್ಟ್ 9ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.
ಈ ಅಂಗವಾಗಿ ಆಗಸ್ಟ್ 9ರಂದು ಮಧ್ಯಾಹ್ನ 3.30ಕ್ಕೆ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದ್ವಾರದಿಂದ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಬೃಹತ್ ವಾಹನ ಜಾಥಾ ಆಯೋಜಿಸಲಾಗಿದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶ ವಿಭಜನೆಯ ಕರಾಳ ಘಟನೆಯನ್ನು ಸ್ಮರಿಸುತ್ತಾ, ಅಖಂಡ ಭಾರತದ ಸಂಕಲ್ಪ ಹಾಗೂ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಳಿಕ ಸಂಜೆ 6 ಗಂಟೆಗೆ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪ ಪೊಲೀಸ್ ನಿರೀಕ್ಷಕರಾದ ಶ್ರೀ ಗುರುವ ಮೂಲ್ಯ (ನಾರ್ಲ ಪಡೀಲ್) ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಯೋಜಕರಾದ ಶ್ರೀ ಸತೀಶ್ ದಾವಣಗೆರೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಯುವ ಉದ್ಯಮಿ ಶೈಲೇಶ್ ಬಜಿಲಕೆರಿ (ದೇವಿಪುರ) ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತ ಬಂಧು-ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹಿಂದು ಜಾಗರಣ ವೇದಿಕೆ ಉಳ್ಳಾಲ ತಾಲೂಕಿನ ತಾಲೂಕು ಸಂಯೋಜಕರು ಹಾಗೂ ಸಹ ಸಂಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.