ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಒಕ್ಕೂಟ ನೀಡಿದ ಪಂಪ್‍ವೆಲ್ ಬಂದ್‍ಗೆ ಹಿಂದೂ ಯುವ ಸೇನೆ ಪೂರ್ಣ ಬೆಂಬಲ ನೀಡಿದೆ.
ಸಾಂದರ್ಭಿಕ ಚಿತ್ರ
ನಾಳೆ ನಡೆಯಲಿರುವ ಪಂಪ್ ವೆಲ್ ಬಂದ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಯುವ ಸೇನೆಯ ಎಲ್ಲಾ ಶಾಖೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಯುವ ಸೇನಾ ಕೇಂದ್ರ ಕಚೇರಿಯಿಂದ ಜಾಥಾದ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಲಿಕ್ಕಿದ್ದು, ನೇತ್ರಾವತಿ ಹೋರಾಟಕ್ಕೆ ಜಯ ಸಿಗುವವರೆಗೆ ನಮ್ಮ ಸಹಕಾರ ಇರುತ್ತದೆ ಎಂದು ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಕಾರ್ಯದರ್ಶಿ ಪದ್ಮನಾಭ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.