ಉಳ್ಳಾಲ: ಪ್ರಧಾನಿ ನರೇಂದ್ರ ಮೋದಿಜಿಯವರು ಅನೇಕ ಜನಪರ ಯೋಜನೆಗಳನ್ನ ನೀಡಿದ್ದಲ್ಲದೆ,ದೇಶದ ಭದ್ರತೆಗೆ ವಿಶೇಷ ಆದ್ಯತೆ ನೀಡಿದ್ದು,ನಾವೆಲ್ಲರೂ ಸಾಂಸ್ಕೃತಿಕವಾಗಿ ಬದುಕಲು ದಾರಿದೀಪವಾಗಿದ್ದಾರೆ. ಉತ್ತಮ ಆರೋಗ್ಯ,ಆಯುಷ್ಯದೊಂದಿಗೆ ಅವರ ಸುದೀರ್ಘ ಆಡಳಿತದ ಫಲವು ದೇಶಕ್ಕೆ ಲಭಿಸಲಿಯೆಂದು ತುಳುನಾಡಿನಲ್ಲಿ ಶ್ರೀ ಲಕ್ಷ್ಮಿನರಸಿಂಹ ಹೋಮ ನಡೆಸುವುದರ ಮೂಲಕ ಸಾಮೂಹಿಕವಾಗಿ ಪ್ರಾರ್ಥಿಸಲಾಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಆಯುಷ್ಯ,ಆರೋಗ್ಯ,ಶಕ್ತಿ ವೃದ್ಧಿ,ದೇವತಾ ಅನುಗ್ರಹ ಪ್ರಾಪ್ತಿ ಹಾಗೂ ದೇಶದ ಸುಭೀಕ್ಷೆಗಾಗಿ ಪ್ರಾರ್ಥಿಸಿ ಉಳ್ಳಾಲ ತಾಲೂಕಿನ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದ ಬಳಿಯ ಸದಾಶಿವ ಐತಾಲ್ ರವರ ಮನೆಯಲ್ಲಿ ನಮೋ ರಾಷ್ಟ್ರ ಭಕ್ತರಿಂದ ಶನಿವಾರದಂದು ನಡೆದ ಸಾಮೂಹಿಕ ಶ್ರೀ ಲಕ್ಷ್ಮಿನರಸಿಂಹ ಹೋಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು,ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು,ಕಾರ್ಯದರ್ಶಿಗಳಾದ ಭರತ್ ಗಟ್ಟಿ ಕೊಣಾಜೆ,ರಮೇಶ್ ಬೆದ್ರೋಳಿಕೆ,ಮಹಿಳಾ ಮೋರ್ಚದ ಅಧ್ಯಕ್ಷರಾದ ಮಾಧವಿ ಉಳ್ಳಾಲ್,ಹಿರಿಯರಾದ ಸೀತಾರಾಮ ಬಂಗೇರ,ಬಿಜೆಪಿ ಮಂಗಳೂರು ಮಂಡಲದ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯ ಶೆಟ್ಟಿ,ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ,ಸೋಮೇಶ್ವರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು,ಸದಸ್ಯರಾದ ಹರೀಶ್ ಕುಂಪಲ,ಸೋನಾ ಸುಭಾಷಿಣಿ,ಸ್ವಪ್ನ ಶೆಟ್ಟಿ,ಮನೋಜ್ ಕಟ್ಟೆಮನೆ,ಪ್ರಮುಖರಾದ ರಮೇಶ್ ಕೊಲ್ಯ,ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು,ಜೀವನ್ ಕುಮಾರ್ ತೊಕ್ಕೊಟ್ಟು,ಜಯಶ್ರೀ ಕರ್ಕೇರ,ಯಶವಂತ ದೇರಾಜೆ,ಶೇಖರ್ ಕಣೀರು ತೋಟ ಮೊದಲಾದವರು ಉಪಸ್ಥಿತರಿದ್ದರು.
ಮೋದಿಜಿಯನ್ನ ಪ್ರಧಾನಿಯನ್ನಾಗಿ ಪಡೆದ ನಾವೇ ಪುಣ್ಯವಂತರು.ಇತ್ತೀಚಿಗೆ ಅವರ ಮನಸ್ಸಿಗೆ ನೋವಾಗುವ ಕೆಲವೊಂದು ಅಹಿತಕರ ಘಟನೆಗಳು ನಡೆದಿದ್ದು,ಈ ಸಂದರ್ಭದಲ್ಲಿ ಮೋದಿಜಿಯ ಭಕ್ತರಾದ ನಾವು ಅವರ ಒಲಿತನ್ನ ಬಯಸಿ ಉಗ್ರನರಸಿಂಹನನ್ನ ಆರಾಧಿಸಿ ಹೋಮವನ್ನ ನಡೆಸಿದ್ದೇವೆ.ಮೋದಿ ಭಕ್ತರು ದೇಶದಾದ್ಯಂತ ಮತ್ತಷ್ಟು ಪೂಜೆ,ಪುನಸ್ಕಾರಗಳನ್ನ ನಡೆಸಬೇಕಿದೆ.
ರವಿಶಂಕರ್ ಸೋಮೇಶ್ವರ
ಉಪಾಧ್ಯಕ್ಷರು,ಬಿಜೆಪಿ ಮಂಗಳೂರು ಮಂಡಲ.