Site icon Ullalavani

ಮಂಗಳೂರು: ಫೇಸ್‌ಬುಕ್ ಸ್ನೇಹ – ಮಹಿಳೆಗೆ 2.67 ಲಕ್ಷ ರೂ . ಪಂಗನಾಮ

ಮಂಗಳೂರು,ಜು. 31 : ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತನ್ನನ್ನು ಬ್ರಿಟನ್ ನಿವಾಸಿ ಎಂದು ನಂಬಿಸಿ, ಬಳಿಕ ಉಡುಗೊರೆ ಪಾರ್ಸೆಲ್ ಹಾಗೂ ಕಸ್ಟಮ್ಸ್ ಕ್ಲಿಯರೆನ್ಸ್ ನೆಪದಲ್ಲಿ ಮಹಿಳೆಯೊಬ್ಬರಿಂದ 2,67,000ರೂ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೈಬ‌ರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ 46 ವರ್ಷದ ಮಹಿಳೆ ಶ್ರೀಮತಿ ಅವರಿಗೆ ಫೇಸ್‌ಬುಕ್‌ನಲ್ಲಿ “ಡಾ. ವಿಲಿಯಮ್ಸ್ ಹೆರ್ಬಟ್” ಎಂಬ ಹೆಸರಿನ ಪ್ರೊಫೈಲ್‌ನಿಂದ ಸ್ನೇಹದ ವಿನಂತಿ ಬಂದಿತ್ತು. ತಾನು ಯುನೈಟೆಡ್ ಕಿಂಗ್‌ಡಮ್ (UK) ಮೂಲದ ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಆತ, ಬಳಿಕ ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಮಹಿಳೆಯ ವಿಶ್ವಾಸಗಳಿಸಿದ್ದ.ಜೂನ್ 28ರಂದು ವಾಟ್ಸಾಪ್ ಕರೆ ಮಾಡಿದ ಆರೋಪಿ, ನಿಮಗಾಗಿ ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಅಪಾರ ಪ್ರಮಾಣದ ಹಣವಿರುವ ಉಡುಗೊರೆ ಪಾರ್ಸೆಲ್ ಕಳುಹಿಸಿದ್ದೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾನೆ.ಮರುದಿನ ಮತ್ತೊಬ್ಬ ವ್ಯಕ್ತಿ ‘ಕಸ್ಟಮ್ಸ್ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಕರೆ ಮಾಡಿ, “ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ತಡೆಹಿಡಿಯಲಾಗಿದೆ. ಲಗೇಜ್ ‌ ಚಾರ್ಜ್ ಪಾವತಿಸಿದರೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾನೆ.ಮರುದಿನ ಮತ್ತೊಬ್ಬ ವ್ಯಕ್ತಿ ‘ಕಸ್ಟಮ್ಸ್ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಕರೆ ಮಾಡಿ, “ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ತಡೆಹಿಡಿಯಲಾಗಿದೆ. ಲಗೇಜ್ ಚಾರ್ಜ್ ಪಾವತಿಸಿದರೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾನೆ.ಇದನ್ನು ನಂಬಿದ ಮಹಿಳೆ ಆರಂಭದಲ್ಲಿ ಫೋನ್‌ಪೇ ಮೂಲಕ 28,000 ಪಾವತಿಸಿದ್ದಾರೆ. ಬಳಿಕ ಪಾರ್ಸೆಲ್‌ನಲ್ಲಿದ್ದ ಚಿನ್ನ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೆದರಿಸಿ, ವಿವಿಧ ಹಂತಗಳಲ್ಲಿ 50,000, 26,000, 20,000 ಸೇರಿದಂತೆ ಮಹಿಳೆಯ ಅಣ್ಣನ ಮಗನ ಫೋನ್‌ಪೇ ಖಾತೆಯಿಂದಲೂ 26,000 ಹಾಗೂ 30,000 ಪಡೆದು ಒಟ್ಟು 1,52,000 ವಂಚಿಸಿದ್ದಾರೆ.ಮತ್ತೆ ವಂಚಕರು, ಜುಲೈ 8ರಂದು ಮತ್ತೊಂದು ಸಂಖ್ಯೆಯಿಂದ ಕರೆ ಮಾಡಿ, ಸಮಯಕ್ಕೆ ಪಾರ್ಸೆಲ್ ಪಡೆಯದ ಕಾರಣ ಪೆನಾಲ್ಟಿ ಚಾರ್ಜ್ ಪಾವತಿಸಬೇಕು ಎಂದು ಹೇಳಿದ್ದರು. ಇದನ್ನೂ ನಂಬಿದ ಮಹಿಳೆ ಜುಲೈ 9ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಚೆಕ್‌ ಮೂಲಕ 87,000 ವರ್ಗಾಯಿಸಿದ್ದಾರೆ .ಒಟ್ಟು 2,67,000 ಹಣ ಪಾವತಿಸಿದ ಬಳಿಕವೂ ಆರೋಪಿಗಳು ಮತ್ತೆ ಹಣಕ್ಕಾಗಿ ಒತ್ತಾಯಿಸುತ್ತಿದ್ದಾಗ ಮಹಿಳೆಗೆ ತಾನು ಸೈಬ‌ರ್ ವಂಚಕರ ಬಲೆಗೆ ಬಿದ್ದಿರುವುದು ಅರಿವಾಗಿದೆ. ತಕ್ಷಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Exit mobile version