Site icon Ullalavani

ನೇತ್ರಾವತಿ ಹೋರಾಟಕ್ಕೆ ಬೆಂಬಲ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಪಶ್ಚಿಮ ಘಟ್ಟ ಮತ್ತು ನೇತ್ರಾವತಿ ನದಿ ಮೂಲಕ್ಕೆ ತೀರಾ ಹಾನಿಯಾಗಲಿರುವ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬದುಕಿಗೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆಯಾಗಲಿರುವ, ಮೀನುಗಾರರಿಗೆ ತೊಂದರೆಯಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಜಿಲ್ಲೆಯ ಜನರು ವಿರೋಧಿಸಿ, ಪ್ರತಿಭಟಿಸುತ್ತಿದ್ದರೂ ಸರಕಾರವು ಈ ಯೋಜನೆಯನ್ನು ಮಾಡಿಯೇ ತೀರುವುದೆಂಬ ಹಠಕ್ಕೆ ಬಿದ್ದಿರುವುದು ಖಂಡನೀಯ.

ಜಿಲ್ಲೆಯ ಜೀವನಾಡಿಯಾಗಿರುವ ತಾಯಿ ನೇತ್ರಾವತಿಯನ್ನು ಉಳಿಸುವುದು ಎಲ್ಲರ ಪ್ರಾಮಾಣಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅ. 15ರಂದು ನಡೆಯುವ ರಸ್ತೆ ತಡೆ ಚಳುವಳಿಗೆ ಉಳ್ಳಾಲ ನೇತ್ರಾವತಿ ನದಿ ತಿರುವು ಸಮಿತಿ, ತೊಕ್ಕೊಟ್ಟು ಶ್ರೀ ವಿದ್ಯಾಗಣಪತಿ ರಾಮ ಸೇವಾ ಸಮಿತಿ ಹೋರಾಟವನ್ನು ಬೆಂಬಲಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version